ಜಿಲ್ಲೆ

ಅಕ್ರಮ ಅಕ್ಕಿ ಸಾಗಣೆ ಲಾರಿ, ಅಕ್ಕಿ ಜಪ್ತಿ

ಕಮಲಾಪುರ: ಭೂಸಣಗಿ ಮರ‍್ಗದಿಂದ ಕಣ್ಣೂರ ಗ್ರಾಮಕ್ಕೆ ಹೋಗುವ ಮರ‍್ಗ ಮಧ್ಯದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಜಪ್ತಿ ಮಾಡಿದ ಘಟನೆ ಶುಕ್ರವಾರ ಸಂಜೆ ಜರುಗಿದೆ. ಲಾರಿ ಚಾಲಕ ಹಾಗೂ ಕ್ಲೀನರ್​ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಲಾರಿ ಯಾರಿಗೆ ಸೇರಿದ್ದು, ಎಷ್ಟು ಪ್ರಮಾಣದ ಅಕ್ಕಿ ಲಾರಿಯಲ್ಲಿದೆ ಎಂಬುದು ಆಹಾರ ಇಲಾಖೆ ಹಾಗೂ ಪೋಲಿಸರು ಖಚಿತಪಡಿಸಿಲ್ಲ. ನಿರಂತರ ಮಳೆಯಿಂದ ಮಾಹಿತಿ ಕಲೆ ಹಾಕಲು ವಿಳಂಬವಾಯಿತು. ಸ್ಥಳಕ್ಕೆ ಕಮಲಾಪುರ ಸಿಪಿಐ ಶಿವಶಂಕರ್​ ಸಾಹು, ಆಹಾರ ನಿರೀಕ್ಷಕ ಸಂತೋಷ ಸೋಲಾಪುರೆ, ಮಹಾಗಾಂವ ಪಿಎಸ್​ಐ ಬಸವರಾಜ ಚಿತ್ತಕೋಟೆ ಭೇಟಿ ನೀಡಿ ಲಾರಿ ಮತ್ತು ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.