ಚಿತ್ರದುರ್ಗ: ಪಿಎಂ ಸ್ವ-ನಿಧಿ ಯೋಜನೆಯಡಿ ಅಕ್ಟೋಬರ್ ಕೊನೆವಾರ ಚಿತ್ರದುರ್ಗದಲ್ಲಿ ಬೃಹತ್ ಸಾಲಮೇಳ ಏರ್ಪಡಿಸುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸಂಸದರ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ನಗರ,ಪಟ್ಟಣಗಳ ಬೀದಿ ಬದಿ ವ್ಯಾಪಾರಿಗಳೊಂದಿಗೆ,ದೋಬಿ ಮತ್ತು ಇಸ್ತ್ರಿ ಅಂಗಡಿ ಮಾಲೀಕರು,ಹಳೆ ಪಾತ್ರೆ ವ್ಯಾಪಾರಿಗಳು,ಹಾಲು,ಪತ್ರಿಕಾ ವಿತರಕರು,ಬಡಗಿ,ಚಮ್ಮಾ ರರು,ಬಿದಿರಿನ ಬುಟ್ಟಿ,ಬಾಸ್ಕೆಟ್,ಏಣಿವ್ಯಾಪಾರಿಗಳು,ಹೂವಿನ ಕುಂಡ ಮಾಡುವಂಥವರು,ನೇಕಾರರು,ಎಳನೀರು ವ್ಯಾಪಾ ರಿಗಳು, ಕ್ಯಾಟರಿಂಗ್ ಸರ್ವಿಸ್ ಮತ್ತಿತರ ಕ್ಷೇತ್ರಗಳಲ್ಲಿರುವ ಬೀದಿ ವ್ಯಾಪಾರಿಗಳಿಗೂ ಕೇಂದ್ರ ಸರ್ಕಾರ ಈ ಯೋಜನೆಯನ್ನು ವಿಸ್ತರಿಸಿದೆ.
ಮೊದಲ ಹಂತದಲ್ಲಿ 10 ಸಾವಿರ ರೂ.ಸಾಲ ಕೊಡಲಾಗುತ್ತದೆ. ಫಲಾನುಭವಿಗಳು ಸಾಲ ಮರು ಪಾವತಿಸಿದರೆ,ಹಂತಹಂತವಾಗಿ ಸದ್ಯಕ್ಕೆ ಐವತ್ತು ಸಾವಿರ ರೂ.ವರೆಗೆ ಸಾಲ ದೊರೆಯಲಿದೆ. ಸಾಲದ ಮೊತ್ತಕ್ಕೆ ವಾರ್ಷಿಕ ಶೇ.10 ಬಡ್ಡಿ ದರವಿದೆ. ಬಡ್ಡಿದರಲ್ಲಿ ಶೇ.7ನ್ನು ಕೇಂದ್ರ ಪಾವತಿಸದರೆ ,ಶೇ.3ನ್ನು ಫಲಾನುಭವಿ ಪಾವತಿಸಬೇಕು.
ಆದರೆ ಫಲಾನುಭವಿಗಳಿಗೆ ಈ ಸಾಲದ ಮಾಹಿತಿಯ ಕೊರತೆ ಇದೆ. ಅವರಲ್ಲಿ ಕುರಿತು ಜಾಗೃತಿ ಮೂಡಿಸಲು ಅಗತ್ಯ ಅನುದಾನವನ್ನು ಕೇಂದ್ರ ಕೊಟ್ಟಿದ್ದರೂ ನಗರ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಹಿಂದು ಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು,ಫಲಾನುಭ ವಿಗಳ ಸಂಖ್ಯೆ ಹೆಚ್ಚಿಸಲು ಪ್ರತಿ ಪಟ್ಟಣ,ನಗರಗಳಲ್ಲೂ ಜಾಗೃತಿಗೆ ಸೂಕ್ತ ಕ್ರಮ ವಹಿಸಬೇಕು.
ನಗರ ಸ್ಥಳೀಯ ಸಂಸ್ಥೆಗಳಿಗೆ ಫಲಾನುಭವಿಯನ್ನು ಕರೆದುಕೊಂಡು ಹೋಗಿ ಅವರ ಹೆಸರು ನೋಂದಾಯಿಸುವಂಥವರಿಗೂ,ಪ್ರತಿ ಫಲಾನುಭವಿಗೆ 200 ರೂ.ಗಳಂತೆ ಉತ್ತೇಜನ ಹಣ ಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳನ್ನು ಅಧಿಕಾರಿಗಳು ಸಂಪರ್ಕಿಸ ಬೇಕು.
ಚಿತ್ರದುರ್ಗದಲ್ಲಿ ಸದ್ಯದಲ್ಲೇ ಕನಿಷ್ಠ ಐದು ಸಾವಿರ ಫಲಾನುಭವಿಗಳಿಗೆ ಸಾಲ ವಿತರಿಸ ಬೇಕೆಂದು ಟಾರ್ಗೆಟ್ ನೀಡಿದರು. ನಗರ ಸ್ಥ ಳೀಯ ಸಂಸ್ಥೆಗಳಲ್ಲಿ ನೋಂದಾಯಿತ ಫಲಾನುಭವಿಗೆ ಬ್ಯಾಂಕ್ ಕೂಡಲೇ ಸಾಲ ಮಂಜೂರು ಮಾಡಬೇಕು. ಈ ಕುರಿತು ಆರ್‌ಬಿಐ ಸೂ ಚನೆ ಇದೆ ಎಂದರು.
ಕಥೆ ಹೇಳ ಬೇಡಿ
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್,ಜಾಗೃತಿ ಮೂಡಿಸದ ಅಧಿಕಾರಿಗಳ ನಡೆಯ ವಿರುದ್ಧ ತೀವ್ರ ಅಸಮಾಧಾನ ಹೊರ ಹಾ ಕಿದರು. ಕಥೆ ಹೇಳಬೇಡಿ,ಬಡ ವ್ಯಾಪಾರಿಗಳಿಗೆ ಕೇಂದ್ರ ಒದಗಿಸಿರುವ ಸೌಲಭ್ಯವನ್ನು ಒದಗಿಸಲು ಸೇವೆ ಎಂದು ತಿಳಿದು ಶ್ರಮಿಸಿ. ನಮ್ಮ ಜಿಲ್ಲೆ ಅನುಷ್ಠಾನದಲ್ಲಿ ಹಿಂದಿದೆ. ಪ್ರತಿ ಬುಧವಾರ ಬ್ಯಾಂಕಿನಲ್ಲಿ ಈ ಯೋಜನೆ ಸಾಲ ಮೇಳ ನಡೆಯುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಬ್ಯಾಂಕಿನವರ ಉದಾಸೀನ ಕಾರಣವೆಂದು ಬೇಸರಿಸಿದರು.
ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಅ.3ರವರೆಗೆ 4858 ಅರ್ಜಿದಾರರ ಪೈಕಿ 4386 ಅರ್ಜಿದಾರರಿಗೆ ಸಾಲ ಮಂಜೂರಾಗಿದೆ ಎಂದು ಕೌ ಶಲ್ಯಾಭಿವೃದ್ಧಿ ಇಲಾಖೆ ಪಿಎಂ ಸ್ವನಿಧಿ ಅಭಿಯಾನ ವ್ಯವಸ್ಥಾಪಕ ಅತೀಕ್‌ರೆಹಮಾನ್ ಹೇಳಿದರು.
ಇಲಾಖೆ ಅಧಿಕಾರಿ ಗೋಪಾಲರೆಡ್ಡಿ,ಜಿ ಪಂ ಸಿಇಒ ಎಸ್.ಜೆ.ಸೋಮಶೇಖರ್,ಸಿಇಒ ಸತೀಶ್‌ರೆಡ್ಡಿ,ನಗರ ಯೋಜನಾ ನಿರ್ದೇಶಕ ಮ ಹೇಂದ್ರಕುಮಾರ್,ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ,ಚಳ್ಳಕೆರೆ ನಗರಸಭೆ ಆಯುಕ್ತ ಟಿ.ಚಂದ್ರಪ್ಪ,ಲೀಡ್ ಬ್ಯಾಂಕ್‌ಮ್ಯಾನೇ ಜರ್‌ಎಸ್.ತಿಪ್ಪೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೋಹನ್‌ಕುಮಾರ್, ವಿವಿಧ ನಗರಸಭೆ,ಪುರಸಭೆ,ಪಪಂ ಮುಖ್ಯಾಧಿಕಾರಿಗಳು,ಅಧಿಕಾರಿಗಳು ಇದ್ದರು.