ಬಾಗಲಕೋಟೆ: ಉತ್ತರ ಕರ್ನಾಟಕ ಯುವಕ ಪ್ರಥಮ ಬಾರಿಗೆ ನಾಯಕ ನಟನಾಗಿ ನಟಿಸಿರುವ ಚಾಂಪಿಯನ್ ಚಲನಚಿತ್ರವು ಅಕ್ಟೋಬರ್ 14 ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಕಲಾವಿದ ಆರ್.ಡಿ.ಬಾಬು ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಂಪಿಯನ್ ಚಿತ್ರವು ಅತೀ ಹೆಚ್ಚಿನ ಬಜೆಟ್ ಸಿನಿಮಾವಾಗಿದ್ದು, ಉತ್ತರ ಕರ್ನಾಟಕದ ಬೆಳಗಾವಿಯ ಯುವ ಪ್ರತಿಭೆ ಸಚಿನ ಮೊದಲ ಬಾರಿಗೆ ನಟನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ದೇವರಾಜ್, ಹಾಸ್ಯ ನಟ ಚಿಕ್ಕಣ್ಣ, ನಟಿ ಆದಿತ್ಯೆ ಪ್ರಭುದೇವ ಇದ್ದು, ದುಬೈ, ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಅಂದಾಕಿ ೧೫೦ ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಬಾಗಲಕೋಟೆಯ ನವನಗರದ ಚಂದನ ಚಿತ್ರದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
ಚಾಂಪಿಯನ್ ಚಿತ್ರವು ಅನಾರೋಗ್ಯದಿಂದ ಬಳಲುತ್ತಿರುವ ಪೊಲೀಸನ ಮಗ ಜೀವನದಲ್ಲಿ ಸಾಧನೆ ಮಾಡುವ ಮೂಲಕ ಚಾಂಪಿಯನ್ ಆಗುವ ಸುಂದರ ಕಥಾವಸ್ತುವನ್ನು ಒಳಗೊಂಡಿದೆ. ಉತ್ತಮ ಸಂಗೀತ ಇದ್ದು ಪ್ರೇಕ್ಷಕರಿಗೆ ರಂಜಿಸಲಿದೆ ಎಂದರು.
ಚಾಂಪಿಯನ್ ಚಿತ್ರವನ್ನು ಶಿವಾನಂದ ಎಸ್. ನೀಲಣ್ಣವರ ನಿರ್ಮಿಸಿದ್ದಾರೆ. ಶಾಹುರಾಜ ಸಿಂಧೆ ನಿರ್ದೇಶನ ಮಾಡಿದ್ದಾರೆ. ಚಾಂಪಿಯನ್ ಚಿತ್ರವನ್ನು ಉತ್ತರ ಕರ್ನಾಟಕದ ಜನತೆಗೆ ಸಿನಿಮಾ ವೀಕ್ಷಣೆ ಮಾಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಹಸನ ಬೇವೂರ, ಶಿವು ಜಾಲಗಾರ, ರಂಗಪ್ಪ ಬೈರಮಟ್ಟಿ, ಸಾಗರ ಹಿರೇಮನಿ, ನಾರಾಯಣ ಬಡಿಗೇರ ಉಪಸ್ಥಿತರಿದ್ದರು.