ವಿಜಯಪುರ: ಮಹಾಲಕ್ಷ್ಮೀ ದೇವಾಸ್ಥಾನ ಅಕ್ಕನ ಬಳಗದವರ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಜಯನಗರ, ಗುಮಾಸ್ತೆ ಕಾಲೋನಿ, ಆದರ್ಶನಗರ, ಆಶ್ರಮ ರೋಡ ಕಾಲೋನಿ ಮಹಿಳೆಯರೆಲ್ಲ ಸೇರಿ ಕಾರ್ಯಕ್ರಮ ನಡೆಸಿದ್ರು. ಬುರಣಾಪುರದ ಮಾತೊಶ್ರೀ ಯೋಗೇಶ್ವರಿ ಮಾತಾಜಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ರು. ಮುಖ್ಯ ಅತಿಥಿಗಳಾಗಿ ಸುನಿತಾ ದೇವಾನಂದ ಚವ್ಹಾಣ ಹಾಗೂ ಮೀನಾಕ್ಷಿ ಎಸ್ ಉಟಗಿ ಆಗಮಿಸಿದ್ರು. ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಹಿಳಾಮಣಿಗಳು ಭಾಗವಹಿಸಿದ್ರು. ಕಾರ್ಯಕ್ರಮದ ಬಳಿಕ ಕಲರ್ ಕಲರ್ ಸೀರೆಯುಟ್ಟ ನಾರಿಮಣಿಯರು ಫೊಟೋಗೆ ಪೋಸ್ ಕೂಡ ಕೊಟ್ಟರು.