ಚಿಕ್ಕಮಗಳೂರು: ಅಕಾಲಿಕವಾಗಿ ಸುರಿದ ಭಾರಿ ಮಳೆ ಚಿಕ್ಕಮಗಳೂರು ತಾಲೂಕಿನ ಕುರುಬರ ಹಳ್ಳಿ ಗ್ರಾಮದಲ್ಲಿ ಅವಾಂತರವನ್ನೇ ಸೃಷ್ಠಿ ಮಾಡಿದೆ. ಇನ್ನೇನು ಮಾರಾಟ ಮಾಡಬೇಕು ಎನ್ನುವ ಹಂತದಲ್ಲಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ಆದರೆ ರೈತರ ನೆರವಿಗೆ ಮಾತ್ರ ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಹೌದು. ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಮಾಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಹತ್ತಾರು ರೈತರ ನೂರಾರು ಕ್ವಿಂಟಾಲ್ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದಲ್ಲದೆ ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳಿಗೂ ಹಾನಿಯುಂಟಾಗಿದೆ.
ಮಳೆಯ ಕಣ್ಣಾಮುಚ್ಚಾಲೆ ನಡುವೆಯೂ ತಾಲೂಕಿನ ಕುರುಬರಹಳ್ಳಿ ರೈತರು ಕಷ್ಟಪಟ್ಟು ಈರುಳ್ಳಿ ಬೆಳೆ ಬೆಳೆದಿದ್ದರು. ರೈತರ ನಿರೀಕ್ಷೆಯಂತೆಯೇ ಫಸಲು ಉತ್ತಮವಾಗಿತ್ತು. ಈರುಳ್ಳಿಯನ್ನು ಕಿತ್ತ ರೈತರು ತಮ್ಮ ಜಮೀನುಗಳ ಏರು ಜಾಗದಲ್ಲಿಯೇ ಸಂಗ್ರಹಿಸಿ ಇನ್ನೆರಡು ದಿನದಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ರಾತ್ರಿ ವೇಳೆ ಏಕಾಏಕಿ ಧಾರಾಕಾರ ಮಳೆ ಆರಂಭಗೊAಡಿದ್ದರಿAದ ರೈತರಿಗೆ ಕಿತ್ತಿಟ್ಟಿದ್ದ ಈರುಳ್ಳಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಧಾರಾಕಾರ ಮಳೆಯಿಂದಾಗಿ ಈರುಳ್ಳಿ ಗುಡ್ಡೆಗಳೇ ಕೊಚ್ಚಿಹೋಗಿವೆ. ಅಲ್ಲದೆ ಜಮೀನುಗಳಲ್ಲಿಯೂ ಕೊರಕಲುಗಳು ಬಿದ್ದಿದ್ದು, ಮತ್ತೆ ಜಮೀನನ್ನು ಸರಿಮಾಡಿಕೊಳ್ಳಲು ರೈತರು ಹರಸಾಹಸಪಡುವಂತಾಗಿದೆ. ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಈರುಳ್ಳಿಯನ್ನು ರೈತರು ನೀರಿನಿಂದ ಹೊರಹಾಕುತ್ತಿರುವ ಫೋಟೋಗಳು ಎಂಥವರಿಗಾದರೂ ಕಣ್ಣೀರು ತರಿಸುವಂತಿದೆ.
ಈ ಹಿಂದೆಯೇ ಊರಿನ ಕೆರೆ ತುಂಬಿ ಸಣ್ಣ ಪ್ರಮಾಣದಲ್ಲಿ ಕೋಡಿ ಹರಿಯಲಾರಂಭಿಸಿತ್ತು. ಇದೇವೇಳೆ ಮೂರುಗಂಟೆಗಳ ಕಾಲ ಧಾರಾಕಾರವಾಗಿ ಮಳೆಸುರಿದಿದ್ದರಿಂದ ಕೆರೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಕೆರೆ ಮೊದಲೇ ಭರ್ತಿಯಾಗಿದ್ದರಿಂದಾಗಿ ಕೆರೆಗೆ ಬಂದ ನೀರು ನೇರವಾಗಿ ಕೋಡಿಯ ಮೂಲಕ ಹೊರಬಂದಿದೆ. ಆಗ ಕೋಡಿಯ ಕಾಲುವೆ ಉಕ್ಕಿ ಪ್ರವಾಹದಂತೆ ಜಮೀನುಗಳಿಗೆ ನೀರು ನುಗ್ಗಿದೆ.
ಒಂದೇ ಕೋಡಿ ಇದ್ದಿದ್ದರಿಂದಲೇ ಸಮಸ್ಯೆ
ಕುರುಬರಹಳ್ಳಿ ಗ್ರಾಮದಲ್ಲಿರುವ ಕೆರೆಗೆ ಎರಡು ಕೋಡಿಗಳಿದ್ದವು. ಆದರೆ ಕೆರೆಯಲ್ಲಿ ಕಡಿಮೆ ನೀರು ಇದ್ದಿದ್ದರಿಂದ ಇರುವ ನೀರನ್ನು ಉಳಿಸಿಕೊಳ್ಳುವ ಉz್ದೆÃಶದಿಂದ ಒಂದು ಕೋಡಿಯನ್ನು ಮುಚ್ಚಲಾಗಿತ್ತು. ಹೀಗಾಗಿ ಒಂದೇ ಕೋಡಿಯಲ್ಲೇ ಹೆಚ್ಚುವರಿ ನೀರು ಹರಿದುಹೋಗುತ್ತಿತ್ತು.
ಯಾರಿಗೂ ತಮ್ಮ ಭಾಗದಲ್ಲಿ ಹಿಂದೆAದೂ ಬಂದಿರದAಥ ಮಳೆ ಬರುತ್ತದೆ ಎನ್ನುವ ಅರಿವೂ ಇರಲಿಲ್ಲ. ಹೀಗಾಗಿ ಧಾರಾಕಾರ ಮಳೆಯ ನೀರು ಒಂದೇ ಕೋಡಿಯಲ್ಲಿ ಹರಿದಿದ್ದರಿಂದಲೇ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಒಂದು ವೇಳೆ ಎರಡು ಕೋಡಿಗಳಲ್ಲಿ ನೀರು ಹರಿದಿದ್ದರೆ ಇಷ್ಟು ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯ ರೈತರು.
ಅಧಿಕಾರಿಗಳ ವಿರುದ್ಧ ಆಕ್ರೋಶ
ಮಾಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ಭಾರಿ ಮಳೆಯಿಂದಾಗಿ ನಾಶವಾಗಿ ಎರಡು ದಿನ ಕಳೆದರೂ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಅಳಲು ಕೇಳಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿಯಾಗಿರುವ ಬಗ್ಗೆ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಿz್ದÉÃವೆ. ಆದರೆ ಕನಿಷ್ಟ ಸ್ಥಳಕ್ಕೆ ಬರುವ ಸೌಜನ್ಯವನ್ನೂ ಅಧಿಕಾರಿಗಳು ತೋರಿಲ್ಲ. ಕೇಳಿದರೆ ಕೇವಲ ಈರುಳ್ಳಿಗೆ ಮಾತ್ರ ಹಾನಿ ಸಂಭವಿಸಿದೆ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂಬ ಆಕ್ರೋಶ ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ಹತ್ತಾರು ಮಂದಿ ರೈತರು ಲಕ್ಷಾಂತರ ರೂ. ಬೆಳೆಯನ್ನು ಕಳೆದುಕೊಂಡಿದ್ದಾರೆ. ಬೆಳೆ ಬೆಳೆದು ರೈತರು ಜೀವನ ನಡೆಸಬೇಕಿದೆ. ಬೆಳೆ ಬೆಳೆಯಲು ಲಕ್ಷಾಂತರ ರೂ. ಖರ್ಚು ಮಾಡಿz್ದÉÃವೆ. ಇದೀಗ ಬೆಳೆ ಕಟಾವು ಮಾಡಿದ ಸಂದರ್ಭದಲ್ಲಿ ಈರುಳ್ಳಿ ಕೊಚ್ಚಿ ಹೋಗಿದೆ. ಇಂಥ ಪರಿಸ್ಥಿತಿಯಲ್ಲಿಯೂ ಅಧಿಕಾರಿಗಳು ರೈತರ ನೆರವಿಗೆ ಬರುವುದಿಲ್ಲ ಎಂದರೆ ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.
ಕೂಡಲೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಮಾಣದಲ್ಲಿ ಮಳೆ ಬರುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ತಮ್ಮ ತೋಟದ ಏರು ಪ್ರದೇಶಲ್ಲೇ ೨೦೦ ಕ್ವಿಂಟಾಲ್‌ನಷ್ಟು ಈರುಳ್ಳಿ ಕಿತ್ತು ಗುಡ್ಡೆ ಹಾಕಿದ್ದೆವು. ಆದರೆ ತಡರಾತ್ರಿ ವೇಳೆಯಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಈರುಳ್ಳಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನಂತೆ ಇತರ ಹಲವು ರೈತರೂ ಬೆಳೆ ಕಳೆದುಕೊಂಡಿದ್ದಾರೆ. ಎಲ್ಲರಿಗೂ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
ಕೃಷ್ಣಮೂರ್ತಿ, ಕುರುಬರಹಳ್ಳಿ ರೈತ