ಯಲ್ಲಾಪುರ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಪಿಕಪ್ ವಾಹನವನ್ನು ಪಟ್ಟಣದ ಜೈ ಕರ್ನಾಟಕ ವೆಲ್ಡಿಂಗ್ ಗ್ಯಾರೇಜ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದು, 6 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ನಾಲ್ವರನ್ನು ಬಂಧಿಸಲಾಗಿದೆ.
ಭಟ್ಕಳದ ತಿರುಮಲ ನಾಯಕ ಭಟ್ಕಳ, ಬೆಳಗಾವಿ ಕಣಗಾಂವ ನವರಮೇಶ ರಾಮಪ್ಪ ನೇಗನಾಳ, ಗೋಕಾಕದ ಗಂಗಪ್ಪ ನಿಂಗಪ್ಪ ಟೊನ್ನಿ ಹಾಗೂ ಶಿವರಾಯಪ್ಪ ಶಿವ ಗುಂಡಪ್ಪ ಪಾಟೀಲ ಬಂಧಿತರು.
ಅವರು ಮಹೇಂದ್ರ ಪಿಕಪ್ ವಾಹನದಲ್ಲಿ 5 ಕೋಣಗಳು ಹಾಗೂ ಒಂದು ಹಸುವನ್ನು ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದು, ಜಾನುವಾರುಗಳನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.