ದಾಂಡೇಲಿ: ನಗರದ ಅಂಬೇವಾಡಿಯ ಬಂಗೂರನಗರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್-19 ಕೇಂದ್ರ ಸ್ಥಾಪನೆ ವಿರೋಧಿಸಿ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲಾರ್ ಕಚೇರಿಯ ಶಿರಸ್ತೇದಾರ್ ಗೋಪಿ ಚವ್ಹಾಣ ಮೂಲಕ ಸಲ್ಲಿಸಿದರು.
ಇಲ್ಲಿ ಕ್ವಾರಂಟೈನ್ ಕೇಂದ್ರದ ಸಿದ್ಧತೆಯ ಕಾರ್ಯ ಚುರುಕುಗೊಂಡಿದ್ದು, ಈ ಪ್ರದೇಶದಲ್ಲಿ ಖಾಸಗಿ ಬ್ಯಾಂಕ್, ಬಸ್ ನಿಲ್ದಾಣ, ಹೆಸ್ಕಾಂ ಕಚೇರಿ, ಕಿರಾಣಿ ಅಂಗಡಿಗಳು ಗ್ಯಾರೇಜ್ಗಳಿದ್ದು ಈ ಭಾಗದಲ್ಲಿ ಜನರ ಓಡಾಟ ಹೆಚ್ಚಿದೆ ಹೀಗಾಗಿ ಇಲ್ಲಿ ಕೋವಿಡ್-19 ಕೇಂದ್ರ ಸ್ಥಾಪನೆ ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ರಫಿಕ್ ಕಾನ್, ಗಿರಿಜಾ ಹುಲಿಕೊಪಕರ್, ಎ.ಜಿ. ಹುಕ್ಕರಿ, ಸುಶೀಲಕುಮಾರ ಗಿರಿ, ಮಂಜುಳಾ ಸಾಲಕ್ಕಿ, ಫಿರೋಜ ಪಿರಜಾದೆ, ಎಚ್.ಬಿ. ಕೊನ್ನೂರ, ಫರಜಾನಾ ಎಂ. ಮುಲ್ಲಾ, ಸಿ.ಎಲ್. ಸೋನಾರ್ ಇತರರು ಇದ್ದರು.