ಜಿಲ್ಲೆ

ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್ಸಿಗೆ ಇಲ್ಲ

ಚಿತ್ರದುರ್ಗ:ಗೃಹ ಸಚಿವ ಅಮಿತ್‌ಷಾ ರಾಜ್ಯಸಭೆಯಲ್ಲಿ, ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರ ಹೆಸರು ಜಪಿಸುತ್ತಿದ್ದಾರೇ ವಿನಾ,ಅವರನ್ನು ಗೌರವಿಸು ವ ಕೆಲಸ ಮಾಡಲಿಲ್ಲವೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಜೀವಿತಾವಧಿ ಅವರನ್ನು ಅವಮಾನಿಸಿ ಈಗ ಅವರ ಹೆಸರನ್ನು ಜಪಿಸುತ್ತಿದ್ದೀರಿ, ಆದರೆ ಬಿಜೆಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇವರಂತೆ ನೋಡುತ್ತಿದ್ದೇ ಎಂಬ ಅರ್ಥದ ಹೇಳಿಕೆಯನ್ನ್ನು ಕಾಂಗ್ರೆಸ್ಸಿಗರು ತಿರುಚುವ ಮೂಲಕ ದೇಶ ದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವುದು ಅತ್ಯಂತ ಖಂಡನೀಯವೆಂದು ಕಾಂಗ್ರೆಸ್ ವಿರುದ್ಧ ಕಾರಜೋಳ ಕಿಡಿಕಾರಿದ್ದಾರೆ.

ಪಂಡಿತ್ ಜವಾಹರಲಾಲ್ ನೆಹರು ನೇತೃತ್ವದಲ್ಲಿ ಕಾಂಗ್ರೆಸ್ ಅಂಬೇಡ್ಕರ್‌ರನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬುದು ಜಗತ್ತಿಗೆ ಗೊತ್ತಿದೆ. ಅಂಬೇಡ್ಕರ್ ನಿಧನ ಹೊಂದಿದ್ದಾಗ ಹೊಸದಿಲ್ಲಿಯಲ್ಲಿ ಅವರ ಅಂತಿಮಸಂಸ್ಕಾರಕ್ಕೆ ಆರಡಿ ಮೂರಡಿ ಜಾಗ ನೀಡದ ಕಾಂಗ್ರೆಸ್ಸಿಗೆ ಅಂ ಬೇಡ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ.

ಅರ್ಥಶಾಸ್ತ್ರಜ್ಞರಾಗಿದ್ದರೂ ಅಂಬೇಡ್ಕರ್‌ಗೆ ಆರ್ಥಿಕ ಇಲಾಖೆ ನೀಡದೆ ಅವಮಾನಿಸಿದ್ದು ಕಾಂಗ್ರೆಸ್.ನೆಹರು ಸಂಪುಟಕ್ಕೆ ರಾಜಿನಾಮೆ ನೀ ಡಿ ಹೊರ ಬಂದ ಬಳಿಕ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಉದ್ದೇಶಪೂರ್ವಕವಾಗಿ ಸೋಲಿಸಿ ಕಾಂ ಗ್ರೆಸ್ ಅವಮಾನಿಸಿತು.ಅಂಬೇಡ್ಕರ್ ಜೀವಿತಾವಧಿ ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸದೆ,ಗಾಂಧಿ ಕುಟುಂಬಕ್ಕೆ ಭಾರತ ರತ್ನ ಪ್ರಶಸ್ತಿ ಕೊ ಟ್ಟುಕೊಂಡು ಬರಲಾಯಿತು.ಅಂಬೇಡ್ಕರ್‌ಗೆ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಿ ತು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ,ಅಂಬೇಡ್ಕರ್‌ಗೆ ಸಂಬಂಧಿಸಿ ಐದು ಸ್ಥಳಗಳನ್ನು ಪಂಚತೀರ್ಥಗಳೆಂದು ಘೋಷಿಸಿ ಪ್ರ ವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಿದೆ. ಅವರ 125ನೇ ಜನ್ಮದಿನಾಚರಣೆ ಸ್ಮರಣೆಗಾಗಿ ಡಿಜಿಟಲ್ ಬೀಮ್ ಆ್ಯಪ್‌ನ್ನು ದೇಶಕ್ಕೆ ಸಮರ್ಪಿಸಿ ದೆ ಎಂದು ಕಾರಜೋಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.