filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ಜಿಲ್ಲೆ

ಅಂಬೇಡ್ಕರ್ ಹೆಸರನ್ನು ಹೇಳುವುದು ಘನತೆಯ ಸಂಕೇತ

ಚಿತ್ರದುರ್ಗ: ಕೇಂದ್ರ ಸಚಿವ ಅಮಿತ್ ಷಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ನೀಡಿರುವ ಹೇಳಿಕೆ ಖಂಡನೀಯ ಎಂದು ಅಹಿಂದ ಚಳವಳಿ ಜಿಲ್ಲಾ ಮುಖ್ಯಸಂಚಾಲಕ ಟಿ. ಕೆಂಚಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಕುರಿತು ಮನಸ್ಸಿನಲ್ಲಿರುವುದನ್ನು ಪ್ರಕಟಿಸಿರುವ ಷಾ ರಾಜೀನಾಮೆ ನೀಡ ಬೇಕು. ಪ್ರಧಾನಿ ನರೇಂದ್ರ ಮೋದಿ, ಷಾ ಅವರನ್ನು ವಜಾಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಅಂಬೇಡ್ಕರ್ ಹೆಸರು ಹೇಳುವುದು ಘನತೆ, ಆತ್ಮಗೌರವದ ಸಂಕೇತ. ಸಂವಿಧಾನ, ಅಂಬೇಡ್ಕರ್ ಅವರನ್ನು ಅವಮಾನಿಸುವವರನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕು. ಸಂವಿಧಾನದ ವಿರುದ್ಧ ಧ್ವನಿ ಎತ್ತುತ್ತಿರುವ ಆರ್‌ಎಸ್‌ಎಸ್ ನಿಷೇಧಿಸಬೇಕು ಎಂದರು.

ಜಿಲ್ಲಾ ಸಂಚಾಲಕ ಆನಂದ್‌ಕುಮಾರ್ ಮಾತನಾಡಿ, ಷಾ ಹೇಳಿಕೆ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ದೇಶದ 140 ಕೋಟಿ ಜನರಿಗೆ ಎಸಗಿದ ದ್ರೋಹ. ದೇವರ ಹೆಸರಲ್ಲಿ ಮನುವಾದ ಮತ್ತೆ ತರುವ ಹುನ್ನಾರ ನಡೆದಿದೆ. ಶ್ರೇಷ್ಠ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರಿಂದಾಗಿ ವಿಶ್ವವೇ ಭಾರತವನ್ನು ನೋಡುವಂತಾಗಿದೆ. ಷಾ ಹೇಳಿಕೆ ಅಕ್ಷಮ್ಯ ಅಪರಾಧ ಎಂದರು.

ಚಿಂತಕ ಪ್ರೊ.ಸಿ.ಕೆ. ಮಹೇಶ್ ಮಾತನಾಡಿ, ದೇವರಿಂದ ಶೋಷಿತರು, ಜನಸಾಮಾನ್ಯರ ಬದುಕು ಹಸನಾಗಿಲ್ಲ. ಅಮಿತ್ ಷಾ ದನಿ ಆರ್‌ಎಸ್‌ಎಸ್‌ನದ್ದಾಗಿದೆ. ಬಿಜೆಪಿ ಬಹುನಟನೆ ಮಾಡುತ್ತಿದೆ. ವಿದೇಶಗಳಿಗೆ ಹೋದಾಗ ಬುದ್ಧ, ಅಂಬೇಡ್ಕರ್ ಅವರ ನಾಡಿನಿಂದ ನಾನು ಬಂದವನು ಎನ್ನುವ ಮೋದಿ ಅವರು ಷಾ ಹೇಳಿಕೆ ಕುರಿತು ಮೌನ ಹಾಗೂ ಬಿಜೆಪಿಯ ದಲಿತ ಸಂಸದರು, ಮಾಜಿ ಸಚಿವರ ಹೇಳಿಕೆ ಅಚ್ಚರಿ ತರಿಸುತ್ತದೆ. ಕಳೆದ ಚುನಾವಣೆಯಲ್ಲಿ ಪೆಟ್ಟು ತಿಂದಿರುವ ಬಿಜೆಪಿ, ಮುಂದೆ ಅಧಿಕಾರ ಕಳೆದಕೊಳ್ಳಲಿದೆ. ಷಾ ಅವರ ಹೇಳಿಕೆ ದಲಿತರು, ಹಿಂದುಳಿದವರನ್ನು ಎಚ್ಚರಿಸಿದೆ. ಸಂವಿಧಾನ ಹಾಗೂ ಮನುಸ್ಮತಿ ಸಿದ್ಧಾಂತ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಡಿ. ದುರುಗೇಶ್, ಎನ್. ಸತ್ಯಪ್ಪ, ಎಂ. ಮಲ್ಲಿಕಾರ್ಜುನ್, ಟಿ. ತಿಪ್ಪೇಸ್ವಾಮಿ, ಅವಿನಾಶ್, ಎಚ್. ರಾಜಪ್ಪ, ಎನ್. ಶಿವಮೂರ್ತಿ, ಜ್ಯೋತಿಲಕ್ಷ್ಮೀ, ಎನ್. ಜ್ಯೋತಿ, ವೀಣಾಗೌರಣ್ಣ ಇತರರು ಇದ್ದರು.

-----