ಜಿಲ್ಲೆ

ಅಂಬೇಡ್ಕರ್ ಸಾಮಾಜಿಕ ಚಳುವಳಿಯನ್ನು ಮುನ್ನಡೆಸಿದ ಕಾನ್ಶಿರಾಂ

ಚಾಮರಾಜನಗರ: ನಗರದ ಪರಿವರ್ತನಾ ಅಧ್ಯಯನ ಕೇಂದ್ರದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ದಾದಾಸಾಹೇಬ್ ಕಾನ್ಶಿರಾಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ 91 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ ಚಳುವಳಿಯನ್ನು ಕಾನ್ಶಿರಾಂ ಅವರು ಮುನ್ನೆಡೆಸಿದರು. ಅವರ ಹೋರಾಟದ ಲವಾಗಿ ಪ್ರತಿಯೊಂದು ಪಕ್ಷಗಳಲ್ಲಿಯೂ ದಲಿತರು, ಹಿಂದುಳಿದವರಿಗೆ ಮಾನ್ಯತೆ ಸಿಗುವಂತಾಗಿದೆ. ಅವರ ಪರಿಶ್ರಮದ ಲವಾಗಿ ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ. ಅವರ ಆಲೋಚನೆಗಳನ್ನು ಇಂದಿನ ಸಮಾಜ ಅಳವಡಿಸಿಕೊಂಡು ಮುನ್ನಡೆಯಬೇಕಿದೆ. ಪ್ರಸ್ತುತ ಕಾನ್ಶಿರಾಂ ಅವರ ಸೈದ್ಧಾಂತಿಕ ಬದ್ಧತೆಯ ರಾಜಕಾರಣ ನಾಡಿನಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಸಂಯೋಜಕ ವಕೀಲ ಪುಟ್ಟಸ್ವಾಮಿ ರಾಮಸಮುದ್ರ, ಜಿಲ್ಲಾ ಉಸ್ತುವಾರಿ ಅಮಚವಾಡಿ ಪ್ರಕಾಶ್, ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಚಂದ್ರಕಾಂತ್, ರಂಗಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.