ಲಿಂಗದಹಳ್ಳಿಯಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬರ ಜೀವನ ಮೌಲ್ಯ ಮತ್ತು ವಿಚಾರಧಾರೆ ಹಾಗೂ ಕಾನೂನು ಅರಿವು ಮೂಡಿಸುವ ನಾಟಕೋತ್ಸವದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ರತ್ನಮ್ಮ, ಟಿ.ಎನ್.ಜಗದೀಶ್, ಬಿ.ಆರ್.ರವಿ, ಜಿ.ಎಸ್.ರಚನಾ ಇತರರಿದ್ದರು. 
ಜಿಲ್ಲೆ

ಅಂಬೇಡ್ಕರ್ ವ್ಯಕ್ತಿತ್ವ ಆದರ್ಶ

ತರೀಕೆರೆ: ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ರಚಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಅನುಕರಣೀಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಲಿಂಗದಹಳ್ಳಿಯಲ್ಲಿ ಸದ್ಗುರು ಜನಸೇವಾ ೌಂಡೇಶನ್‌ನಿಂದ ಆಯೋಜಿಸಿದ್ದ ಬಾಬಾ ಸಾಹೇಬರ ಜೀವನ ಮೌಲ್ಯ ಮತ್ತು ವಿಚಾರಧಾರೆ ಹಾಗೂ ಕಾನೂನು ಅರಿವು ಮೂಡಿಸುವ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಸದ್ಗುರು ಜನಸೇವಾ ೌಂಡೇಶನ್ ಉತ್ತಮ ಚಿಂತನೆ ಜತೆ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದು, ಇಂಥ ಕಾರ್ಯಕ್ರಮ ಹೆಚ್ಚೆಚ್ಚು ಆಯೋಜನೆಗೊಳಿಸಬೇಕು ಎಂದರು. ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದ್ಗುರು ಜನಸೇವಾ ೌಂಡೇಶನ್ ಅಧ್ಯಕ್ಷ ಟಿ.ಎನ್.ಜಗದೀಶ್, ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ, ಕೆಡಿಪಿ ಸದಸ್ಯೆ ಜಿ.ಎಸ್.ರಚನಾ, ಪ್ರಾಚಾರ್ಯ ಸೋಮಶೇಖರ್, ಪಿಡಿಒ ನಾಗರಾಜ್, ಸ್ಫೂರ್ತಿ ಅಕಾಡೆಮಿ ಅಧ್ಯಕ್ಷ ಸುಂದರೇಶ್, ಸದ್ಗುರು ಜನಸೇವಾ ೌಂಡೇಶನ್ ಕಾರ್ಯದರ್ಶಿ ಟಿ.ಎಸ್.ದೇವರಾಜ್, ಖಜಾಂಚಿ ದರ್ಶನ್ ಇತರರಿದ್ದರು.