ಬೇಲೂರು: ಡಾ.ಬಿ.ಆರ್.ಅಂಬೇಡ್ಕರ್‌ರವರು ವಿಶ್ವ ವಿಜ್ಞಾನಿಯಾಗಲು ಭಾಗವಾನ್ ಬುದ್ಧರ ಆದರ್ಶಗಳೆ ಮುಖ್ಯ ಕಾರಣ ಎಂದು ಬೆಂಗಳೂರು ಬೌದ್ಧ ಸಂಘಟನೆ ಒಕ್ಕೂಟದ ಅಧ್ಯಕ್ಷ ಬಿ.ಗೋಪಾಲ್ ಹೇಳೀದರು.
ತಾಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮದ ಸಮೀಪದ ಅಂಬೇಡ್ಕರ್ ಬೆಟ್ಟದಲ್ಲಿರುವಗಾಂಧಾರ ಬುದ್ಧ ವಿಹಾರದಲ್ಲಿ ಕರ್ನಾಟಕ ಬೌದ್ಧ ದರ್ಮ ಸಮಿತಿಗಳ ಒಕ್ಕೂಟದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಬೌದ್ಧ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮನುವಾದಿಗಳು ನಾವೆ ಹೆಚ್ಚು ಬುದ್ಧಿವಂತರು ಎಂದು ತಿಳಿದಿದ್ದಾರೆ.
ಆದರೆ ನಮ್ಮ ದೇಶದಲ್ಲಿ ಸಂವಿಧಾನ ಬರೆಯುವವರು ಯಾರು ಇರಲಿಲ್ಲ, ಇಂಗ್ಲೆಂಡ್‌ಗೆ ಹೋಗಿ ಹುಡಕುವ ಸಂದರ್ಭ ಪ್ರಪಂಚಕ್ಕೆ ಮಾದರಿಯಾಗುವ ಸಂವಿಧಾನ ಬರೆದುಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್ ಬುದ್ಧನ ನಾಡಿನಲ್ಲಿ ಹುಟ್ಟಿದವರು. ತಂದೆಯ ಮಾರ್ಗದರ್ಶನ ಪಾಲಿಸುತ್ತಿದ್ದ ಅಂಬೇಡ್ಕರ್ ಇಷ್ಟು ದೊಡ್ಡ ವಿಶ್ವ ಜ್ಞಾನಿಯಾಗಲು ಭಗವನ್ ಬುದ್ಧರ ಆದರ್ಶಗಳೆ ಕಾರಣ. ಸಂವಿಧಾನದಲ್ಲಿನ ಮೀಸಲಾತಿಯನ್ನು ಈಗಾಗಲೆ ಶೇಕಡಾ 50% ತೆಗೆದು ಹಾಕಿದ್ದಾರೆ. ಇನ್ನುಳಿದಿರುವ ಶೇಕಡಾ 50% ಅನ್ನು ಉಳಿಸುವ ಕೆಲಸಕ್ಕೆ ಹೋರಾಟ ಮಾಡುತಿದ್ದೇವೆ. ಸಂವಿಧಾನದ ಹಕ್ಕು ಆಶಯವನ್ನು ಉಳಿಸಲು ಬುದ್ಧರ ಅನುಯಾಯಿಗಳಿಂದಲೇ ಪ್ರಾರಂಭವಾಗಬೇಕಿದೆ. ಪರಿಶಿಷ್ಟ ಜಾತಿಯಲ್ಲಿ ನೂರೊಂದು ಜಾತಿ ಇದ್ದು, ಒಂದು ಜಾತಿ ಕಂಡರೆ ಇನ್ನೊಂದು ಜಾತಿಯವರಿಗೆ ಆಗುವುದಿಲ್ಲ. ಈ ರೀತಿಯ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿದ್ದಾರೆ. ಇಂತಹ ಸಂದರ್ಭ ಬುದ್ದನ ಅನುಯಾಯಿಗಳು ಎಲ್ಲರು ಒಗ್ಗೂಡುವುದು ಅವಶ್ಯ. ಡಾ.ಬಿ.ಆರ್. ಅಂಬೇಡ್ಕರ್‌ರವರ ಅನುಯಾಯಿಗಳನ್ನು ಮೊಟಕುಗೊಳಿಸಲು 70 ವ?ರ್ಗಳಿಂದ ನಮ್ಮ ಶತ್ರುಗಳು ?ಡ್ಯಂತ್ರ ಮಾಡುತ್ತಲೇ ಇದ್ದಾರೆ. ಅವರನ್ನು ಮೊಟಕುಗೊಳಿಸಲಿಲ್ಲವೆಂದರೆ ಬೌದ್ಧ ಧರ್ಮ ಅವರನ್ನು ಆವರಿಸಿಕೊಳ್ಳುತ್ತದೆ ಎಂಬ ಆತಂಕದಿಂದ ನಮ್ಮಲ್ಲಿ ಜಾತಿ ಹೆಸರಲ್ಲಿ ಘ?ರ್ಣೆ ಹುಟ್ಟುಹಾಕುತ್ತ ಒಬ್ಬರಿಗೊಬ್ಬರು ಬೆರೆಯದಂತೆ ಮಾಡಿದ್ದಾರೆ. ನಾವು ಶತ್ರುಗಳ ?ಡ್ಯಂತ್ರವನ್ನು ಸರಿಯಾದ ರೀತಿಯಲ್ಲಿ ಅಥೈಸಿಕೊಂಡರೆ ನಾವು ಅರ್ಧ ಯುದ್ದವನ್ನು ಗೆಂದತೆ. ಆ ಮಟ್ಟಿಗೆ ಚಿಂತನೆ ನಡಯುತ್ತಿದೆ. ಕರ್ನಾಟಕದಲ್ಲಿ 3690 ಸಂಘಟನೆಗಳು ಕೆಲಸ ಮಾಡುತ್ತಿವೆ. ಇವೆಲ್ಲವು ಹೊಂದಾದರೆ ರಾಜ್ಯವೇ ನಮ್ಮದಾಗುತ್ತದೆ. ಬೌದ್ಧ ಧರ್ಮದ ಮನಸ್ಥಿಯ ಜನರು ಪ್ರತಿ ಹಳ್ಳಿ, ಹೋಬಳಿ, ತಾಲೂಕು, ಜಿಲ್ಲೆಯಲ್ಲಿ ಹುಟ್ಟು ಹಾಕುವ ಕೆಲಸ ಮಾಡಬೇಕು. ನಮ್ಮ ದೇಶದ ಒಂದು ವ?ರ್ದ ಬಜೆಟ್ 25 ಲಕ್ಷ ಕೋಟಿ. ಇದರಲ್ಲಿ 5 ಲಕ್ಷ ಕೋಟಿ ದೇಗುಲಗಳಲ್ಲಿ ಉತ್ಪಾದನೆಯಾಗುತ್ತಿದೆ. ಅಲ್ಲಿಗೆ ಹೋಗುವುದು ನಮ್ಮವರೆ. ಹಿರಿಯರು ನಡೆಸಿಕೊಂಡು ಬಂದ ಮೂಡ ನಂಬಿಕೆ ಕಾರಣ. ಮೌಡ್ಯ ಆಚರಣೆಯಿಂದ ದಲಿತರು ಮಾನಸಿಕವಾಗಿ ಹೊರ ಬರಬೇಕು ಎಂದರು.
ಕರ್ನಾಟಕ ಬೌದ್ಧ ಸಮಿತಿ ಅಧ್ಯಕ್ಷ ಮಹಾದೇವಪ್ಪ, ಕಾರ್ಯದರ್ಶಿ ರಾಚಪ್ಪ, ಭೋದಿದತ್ತ ಭಂತೇಜಿ, ಗಾಂಧಾರ ಬೌದ್ಧ ವಿಹಾರದ ರಾಜು, ಸಮಿತಿ ಮುಖಂಡರಾದ ಬಸವರಾಜು, ಅನುಪಮ, ಗಂಗಾಧರ, ಮಂಜುನಾಥ್, ವಿರೂಪಾಕ್ಷ ಪ್ರವೀಣ್, ಕುಮಾರ್ ಗುಪ್ತ ಇತರರಿದ್ದರು.