ಜಿಲ್ಲೆ

ಅಂಬೇಡ್ಕರ್, ಬುದ್ಧನ ಚಿಂತನೆ ಜಾಗೃತಿ ಮೂಡಿಸಿ

Mandya

ಮಳವಳ್ಳಿ: ಅಂಬೇಡ್ಕರ್ ಮತ್ತು ಭಗವಾನ್ ಬುದ್ಧನ ಚಿಂತನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬುದ್ಧ ವಿಹಾರ ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.


ತಾಲೂಕಿನ ಬಾಚನಹಳ್ಳಿ ಸಮೀಪ ಭಾನುವಾರ ನವೋದಯ ಸೇವಾ ಟ್ರಸ್ಟ್ ವತಿಯಿಂದ ಮಿಲಿಂದ ಬುದ್ಧ ವಿಹಾರ ಹಾಗೂ ಬುದ್ಧ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಮತ್ತು ಬೋಧಿ ವೃಕ್ಷ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸಮಾನತೆ ತೊಲಗಿಸಿ ಸಮ ಸಮಾಜದ ನಿರ್ಮಾಣಕ್ಕಾಗಿ ಬುದ್ಧ ತನ್ನ ಬದುಕನ್ನೇ ತ್ಯಾಗ ಮಾಡಿದರೆ, ವಿಶ್ವ ಮೆಚ್ಚಿದ ಶ್ರೇಷ್ಠ ಸಂವಿಧಾನ ಬರೆದು ಅಸ್ಪಶ್ಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟವರು ಅಂಬೇಡ್ಕರ್ ಎಂದು ಬಣ್ಣಿಸಿದರು.


ಮಾಜಿ ಸಚಿವ ಬಿ.ಸೋಮಶೇಖರ್, ಟ್ರಸ್ಟ್ ಅಧ್ಯಕ್ಷ ದರ್ಶನ್ ಮಾತನಾಡಿದರು. ಜ್ಞಾನ ಪ್ರಕಾಶ ಸ್ವಾಮೀಜಿ, ನಳಂದ ವಿಶ್ವವಿದ್ಯಾಲಯದ ಬಂತೇ ಬೋಧಿದತ್ತ, ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಸಂಘಟನೆಯ ಭರತ್ ರಾಜ್, ಜಿಪಂ ಮಾಜಿ ಸದಸ್ಯರಾದ ಪೂರಿಗಾಲಿ ಜಯರಾಜು, ಮಹದೇವಸ್ವಾಮಿ, ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ, ಬಿಜೆಪಿ ಮುಖಂಡ ಹಳದಾಸಹಳ್ಳಿ ಶಿವಣ್ಣ, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಮಹೇಶ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಯತೀಶ್ ದ್ಯಾವಪಟ್ಟಣ, ಕಾಂತರಾಜು ಇತರರಿದ್ದರು.