ಚಿಕ್ಕಬಳ್ಳಾಪುರ : ನಗರದ ಜೈಭೀಮ್ ಪದವಿ ವಿದ್ಯಾರ್ಥಿನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಮಂಗಳವಾರ ಮಾಲಾರ್ಪಣೆ ಮಾಡಿದರು.
ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಡಾ ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಇದೇ ವೇಳೆ ಸಚಿವರಿಗೆ ಬೆಂಬಲಿಗರು ಮತ್ತು ಕಾರ್ಯಕರ್ತರ ದಟ್ಟಣೆಯಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಲ್ಲಿ ಅನೇಕರು ಸಮರ್ಪಕವಾಗಿ ಮಾಸ್ಕ್ ಹಾಕಿರಲಿಲ್ಲ. ಇದಕ್ಕೆ ಟೀಕೆ ವ್ಯಕ್ತವಾಯಿತು.
ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಬಿ.ೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳಪ್ಪ, ಮುಖಂಡರಾದ ಬಿ.ಎನ್.ಗಂಗಾಧರ್, ಎಂ.ಮುನಿಕೃಷ್ಣ, ವೇಣುಗೋಪಾಲ್ ರೆಡ್ಡಿ ಮತ್ತಿತರರು ಇದ್ದರು.