ಕೊಳ್ಳೇಗಾಲ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಚಿವ ಸೋಮಣ್ಣ ಅವರಿಗೆ ಡಾ.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದರು. ಶಾಸಕ ಎನ್.ಮಹೇಶ್, ನಂಜುಂಡಸ್ವಾಮಿ, ವಾಲೆ ಮಹದೇವು , ಚಿಕ್ಕ ಮಾಳಿಗೆ, ವರದರಾಜು, ಜವರಪ್ಪ, ಕೆ.ಕೆ ಮೂರ್ತಿ, ಸಿದ್ದಾರ್ಥ, ರಾಜಶೇಖರ್, ಶಿವಸ್ವಾಮಿ, ಪಾಪಣ್ಣ ಇದ್ದರು. 
ಜಿಲ್ಲೆ

ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಆಗಮಿಸುವಂತೆ ಮನವಿ

ಕೊಳ್ಳೇಗಾಲ: ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಮಹಾ ಮಂಟಪ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನ.26ರಂದು ಆಗಮಿಸುವಂತೆ ಹಾಗೂ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಂದ ಪ್ರತಿಮೆ ಅನಾವರಣ ಕಾರ್ಯಕ್ರಮ ನೆರವೇರಿಸಲು ಅವಕಾಶ ಮಾಡಿಕೊಡುವಂತೆ ಡಾ.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣಾ ಸಮಿತಿ ಪದಾಧಿಕಾರಿಗಳು ಶನಿವಾರ ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಚಾಮರಾಜನಗರಕ್ಕೆ ತೆರಳಲು ಬೆಂಗಳೂರಿನಿಂದ ಆಗಮಿಸಿದ್ದ ಸಚಿವ.ವಿ.ಸೋಮಣ್ಣ ಅವರನ್ನು ಅಂಬೇಡ್ಕರ್ ವೃತ್ತದಲ್ಲಿ ಸ್ವಾಗತಿಸಿದ ಸಮಿತಿ ಪದಾಧಿಕಾರಿಗಳು, ಭೀಮನಗರದ ಮುಖಂಡರು ಮನವಿ ಪತ್ರ ಸಲ್ಲಿಸಿದರು. ಶಾಸಕ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಪ್ರತಿಮೆ ನಿರ್ಮಾಣ ಅಧ್ಯಕ್ಷ ವಾಲೆ ಮಹದೇವು, ಭೀಮನಗರದ ಯಜಮಾನರಾದ ಚಿಕ್ಕ ಮಾಳಿಗೆ, ವರದರಾಜು, ಜವರಪ್ಪ, ಕೆ.ಕೆ.ಮೂರ್ತಿ, ಸಿದ್ದಾರ್ಥ, ರಾಜಶೇಖರ್, ಶಿವಸ್ವಾಮಿ, ಮುಖಂಡರಾದ ಪಾಪಣ್ಣ, ಜಗದೀಶ್, ವಕೀಲ ಬಸವರಾಜು, ಹರೀಶ್ ಇತರರು ಇದ್ದರು.