ಜಿಲ್ಲೆ

ಅಂಬೇಡ್ಕರ್ ಜ್ಞಾನ ಸಂದೇಶ ಪಾಲಿಸಿ

ಕಲಬುರಗಿ: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಡಾ.ಬಿ.ಆರ್.ಅಂಬೇಡ್ಕರ್ ಜೀವನ ಮತ್ತು ಸಂದೇಶ ಪಾಲಿಸಬೇಕು. ಅವರು ನೀಡಿದ ಜ್ಞಾನ, ಉತ್ತಮ ಚಾರಿತ್ರö್ಯ ಮತ್ತು ಸ್ವಾಭಿಮಾನದ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ದಯಾನಂದ ಅಗಸರ ಸಲಹೆ ನೀಡಿದರು.
ಗುಲ್ಬರ್ಗ ವಿವಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವುದು ವಿಶ್ವಾವಿದ್ಯಾಲಯದ ಉz್ದೆÃಶ. ಅದರ ಹಿನ್ನೆಲೆಯಲ್ಲಿ ಪಠ್ಯೇತರ ಮತ್ತು ವಿಶೇಷ ಚಟುವಟಿಕೆ ಆಯೋಜಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಡಾ.ಬಿ.ಆರ್.ಅAಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಪ್ರೊ.ಚಂದ್ರಕಾAತ ಯಾತನೂರ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತಿದೆ. ಪರಸ್ಪರ ಉತ್ತಮ ಭಾವನೆ ಮತ್ತು ಸಹೋದರತೆ ಬೆಳೆಸಲು ಇಂತಹ ಸ್ಪರ್ಧೆ ಪೂರಕವಾಗಿವೆ ಎಂದರು.
ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್ ಪಂದ್ಯಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ, ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ರವಿಕುಮಾರ್, ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಶಿವಶರಣ ಪಾಟೀಲ್ ಇತರರಿದ್ದರು.
ಡಾ.ಹನುಮಂತ ಜಂಗೆ ವಂದಿಸಿದರು. ಬಸವರಾಜ ಪ್ರಾರ್ಥಿಸಿದರು. ಅಣವೀರಗೌಡ ಬಿರಾದಾರ ನಿರ್ವಹಿಸಿದರು. ಡಾ.ಲಕ್ಷಿö್ಮÃಶಂಕರ ಜೋಷಿ ನಾಡಗೀತೆ ಪ್ರಸ್ತುತಪಡಿಸಿದರು.