ಕಲಬುರಗಿ: ಅಂಧರು ಅಸಶಕ್ತರಲ್ಲ, ಅವರಲ್ಲಿ ಅದ್ಭುತ ಹಾಗೂ ಅಗಾಧವಾದ ಶಕ್ತಿ ಇರುತ್ತದೆ. ಅನುಕಂಪದಿಂದ ನೋಡುವ ಬದಲು ಅವಕಾಶ ಕಲ್ಪಿಸಬೇಕು. ಅವರ ಬಾಳಿಗೆ ಬೆಳಕಾಗುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಮಾದರಸನಳ್ಳಿ (ಕೋಬ್ರಾ ಕಾಲನಿ) ಜಿಡಿಎ ಲೇಔಟ್‌ನಲ್ಲಿ ನಿರ್ಮಾಣವಾದ ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿ ಶಾಲೆ ಹೊಸ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅಧ್ಯP್ಷÀತೆ ವಹಿಸಿ ಮಾತನಾಡಿ, ಸಂವಿಧಾನದ ಫಲವಾಗಿ ಎಲ್ಲ ಮಹಿಳೆಯರು ಶಿP್ಷÀಣ ಪಡೆಯಲು ಸಾದ್ಯವಾಗುತ್ತಿದೆ ಎಂದರು.
ವಿಕಲಚೇತನರ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಮಾತನಾಡಿ, ಅತಿ ಹೆಚ್ಚು ಅಂಗವಿಕಲರು ದೇಶದಲ್ಲಿz್ದÁರೆ. ಶಿP್ಷÀಣ ಪಡೆದು ಹಲವಾರು ಕ್ಷೇತ್ರಗಳಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ದತ್ತು ಅಗರವಾಲ್ ಅವರೂ ಅಂಧರಾಗಿದ್ದು, ಅವರ ನೋವು ಏನು ಎಂಬುದು ಅರಿತು ಅಂಧರಿಗಾಗಿ ತಾಯಿಯ ಹೆಸರಿನಲ್ಲಿ ಶಾಲೆ ಪ್ರಾರಂಭಿಸಿದ್ದಾರೆ. ಇದೀಗ ಸ್ವಂತ ಕಟ್ಟಡ ನಿರ್ಮಿಸಿರುವುದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು.
ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮ್ ಕಟ್ಟಡ ಉದ್ಘಾಟಿದರು. ಶಾಲೆಯ ಸಂಸ್ಥಾಪಕ ಅಧ್ಯP್ಷÀ ದತ್ತು ಅಗರವಾಲ್ ಪ್ರಾಸ್ತಾವಿಕ ಮಾತನಾಡಿದರು.
ಪ್ರಮುಖರಾದ ಡಾ.ವಸಂತರಾವ ಮೈಸೂರು, ಡಾ.ಸಿ.ಶಶಿಕಲಾ ಮೈಸೂರು, ಅನೀಲ ರೆಡ್ಡಿ, ಉದಯಕುಮಾರ ಪವಾರ್, ಶರಣಪ್ಪ ಕಿಣಗಿ, ಯಶವಂತ ಗುರುಕರ, ಬಿ.ಜಿ.ದಿವಾಕರ, ಜಿ.ರಮೇಶ, ಚೇತನ ವಾಗ್ಮೋರೆ, ಶೋಭಾರಾಣಿ ಅಗರವಾಲ, ಎಂ.ಐ.ಅರಸಿಕೇರಿ, ಧನರಾಜ ತಾಂಬೂಳೆ, ಅನೀಲ್ ಬುಜಾಡೆ, ಸಂಗೀತಾ ಠಾಕೂರ ಇತರರಿದ್ದರು. ಕನ್ಯಾರಾಣಿ ನಿರೂಪಣೆ ಮಾಡಿದರು.