ಕಲಬುರಗಿ: ಅಂಧರ ಬದುಕಿಗೆ ಬೆಳಕು ನೀಡಿದ ಕೀರ್ತಿ ಗಾನಯೋಗಿ ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಕನ್ನಡ ಭವನದಲ್ಲಿ ಜ್ಞಾನಜ್ಯೋತಿ ಸಾಂಸ್ಕೃತಿಕ ಕಲಾ ಸಂಸ್ಥೆಯಿAದ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಟ್ಟರಾಜರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ಸಂತರನ್ನು ನಿತ್ಯ ಸ್ಮರಿಸಬೇಕು ಎಂದರು.
ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ದೇಸಾಯಿ ಕಲ್ಲೂರಿನ ಹೂಗಾರ ಮನೆತನ ಸಂಗೀತ ಕ್ಷೇತ್ರದ ಸೇವೆ ಸಲ್ಲಿಸುತ್ತಿದೆ. ಮನೆಯಲ್ಲಿ ಪ್ರತಿಯೊಬ್ಬರೂ ಕಲಾವಿದರಿದ್ದಾರೆ. ಅವರ ಕೊಡುಗೆ ಅಮೋಘ ಎಂದು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ್, ಪ್ರಮುಖರಾದ ಚನ್ನವೀರಯ್ಯ ಸ್ವಾಮಿ, ವೀರೇಶ ಹೂಗಾರ ದೇಸಾಯಿಕಲ್ಲೂರ ಇತರರಿದ್ದರು.
ಪ್ರೊ.ಶಿವರಾಜ ಪಾಟೀಲ್ ನಿರೂಪಣೆ ಮಾಡಿದರು. ನಾಟ್ಯಾಂಜಲಿ ಕಲಾ ಕೇಂದ್ರದಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಸುಪ್ರಸಿದ್ಧ ವೈಲಿನ್ ವಾದಕ ಶಂಕರ ಕಬಾಡಿ, ಸಿತಾರವಾದನ ಭಾಗ್ಯಶ್ರೀ ಹೂಗಾರ ದೇಸಾಯಿಕಲ್ಲೂರ ಅವರ ಜುಗಲ್‌ಬಂದಿ ಗಮನಸೆಳೆಯಿತು. ಮಲ್ಲೇಶ ಹೂಗಾರ, ರಘುನಂದನ, ಗೋಪಾಲ ದೇಸಾಯಿಕಲ್ಲೂರ ತಬಲಾ ಸಾಥ್ ನೀಡಿದರು.
ಬಸವರಾಜ ಬಂಟನೂರ, ದೊಡ್ಡಯ್ಯ ಕಲ್ಲೂರ್, ರಮೇಶ ಕುಲಕರ್ಣಿ ಅವರ ಗಾಯನಕ್ಕೆ ಜಡೇಶ ಹೂಗಾರ ದೇಸಾಯಿಕಲ್ಲೂರ ತಬಲಾ, ಬದ್ರಿನಾಥ್ ಮುಡಬಿ ಹಾರ್ಮೋನಿಯಂ ಸಾಥ್ ನೀಡಿದರು.