ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಸಮೀಪದ ದಾದನಟ್ಟಿ ಗ್ರಾಮದ ಸಿದ್ದಪ್ಪ ಕರಿಯಪ್ಪ ಕುರಿಗೆ ಕುಟುಂಬ ಸದಸ್ಯರು ಸಿಹಿ ತಿನ್ನಿಸುತ್ತಿರುವುದು.  
ಜಿಲ್ಲೆ

ಅಂಧ ಹಿರಿಯ ಕಲಾವಿದನಿಗೆ ಕನ್ನಡಮ್ಮನ ಊಡೊಗೊರೆ

ಬಾಗಲಕೋಟೆ: ಚಿಕ್ಕ ವಯಸ್ಸಿನಲ್ಲಿ ಬಡತನ, ಅಪ್ಪ, ಅಮ್ಮನ ಜೊತೆ ಕೇಳುತ್ತಿದ್ದ ಭಜನಾ ಪದವೇ ಬದುಕಿನ ಆಸರೆಯಾಯಿತು. ಕಣ್ಣು ಇಲ್ಲದಿದ್ದರು ಇಂದಿಗೂ ಕಲಾ ಸೇವೆ ನಿಂತಿಲ್ಲ. ಬಯಲಾಟ ಇದ್ದರೇ ಸಾಕು ಸಂಗಡಿಗರಿಗೆ ಸಿದ್ದಪ್ಪಜ್ಜ ಬೇಕೇ ಬೇಕು...!

ಹೌದು, ಜಿಲ್ಲೆಯ ಲೋಕಾಪುರ ಸಮೀಪದ ದಾದನಟ್ಟಿ ಗ್ರಾಮದ ಸಿದ್ದಪ್ಪ ಕರಿಯಪ್ಪ ಕುರಿ(೭೦)ಗೆ ೨೦೨೪ ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಮನೆಯಲ್ಲಿ ದೀಪಾವಳಿ ಸಂಭ್ರಮಕ್ಕೆ ರಾಜ್ಯೋತ್ಸವ ಪ್ರಶಸ್ತಿ ಮತ್ತಷ್ಟು ಸಿಹಿ ಉಣಬಡಿಸಿದೆ. ಲೋಕಾಪುರ ಮೇರುಕಲವಾದಿ ದೇಶಪಾಂಡೆ ಅವರೊಂದಿಗೆ ಬಯಲಾಟ ತಂಡ ಸೇರಿದ ಸಿದ್ದಪ್ಪ ಕಳೆದ ೫೦ ವರ್ಷಗಳಿಂದ ಹಿಮ್ಮೇಳನದ ಗಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮಾತ್ರ ವಿರಾಮ ನೀಡಿದ್ದ ಸಿದ್ದಪ್ಪ ಇಂದಿಗೂ ಶ್ರೀಕೃಷ್ಣಾ ಪಾರಿಜಾತಕ್ಕೆ ಆಮಂತ್ರಣ ಬಂದರೇ ನಿಲ್ಲುವದಿಲ್ಲ. ಸಂಗಡಿಗರೊಂದಿಗೆ ನಿಗಽತ ಕಾರ್ಯಕ್ರಮಕ್ಕೆ ಹಾಜರಿರುತ್ತಾರೆ. ಸಹ ಕಲಾವಿದರಿಗೂ ಸಹ ಸಿದ್ದಪ್ಪಜ್ಜ ಇಲ್ಲ ಎಂದರೇ ನಡೆಯುವದಿಲ್ಲ. ಕಡ್ಡಾಯವಾಗಿ ಅಜ್ಜನ ಮನವೊಲಿಸಿ ಕರೆದು ಹೋಗಿ ವಾಪಸ್ ಮನೆಗೆ ತಂದು ಬಿಡುತ್ತಾರೆ. ಕಣ್ಣು ಇಲ್ಲದ ಕಾರಣ ಸಹ ಕಲಾವಿದರು ಕುಟುಂಬದ ಸದಸ್ಯರಂತೆ ಕಾಳಜಿ ವಹಿಸುವುದು ವಿಶೇಷ. ಪ್ರಶಸ್ತಿಗಾಗಿ ಸೇವೆ ಸಲ್ಲಿಸಿಲ್ಲ. ಅರ್ಜಿಯೂ ಹಾಕಿರಲಿಲ್ಲ. ಬಯೋಡಾಟ ಅಽಕಾರಿಗಳೇ ತರಿಸಿಕೊಂಡು ಪ್ರಶಸ್ತಿ ನೀಡಿರುವುದು ಸಿದ್ದಪ್ಪ ಕುರಿ ಸಂತಸ ಮುಗಿಲು ಮುಟ್ಟುವಂತೆ ಮಾಡಿದೆ. ಏಪ್ರಿಲ್-೪ ೧೯೫೭ ರಲ್ಲಿ ಜನಿಸಿದ ಸಿದ್ದಪ್ಪ ಅವರಿಗೆ ತಂದೆ ಕರಿಯಪ್ಪ, ತಾಯಿ ಯಲ್ಲವ್ವ. ಮದುವೆಯಾಗಿದೆ. ಆದರೇ ಮಕ್ಕಳು ಇಲ್ಲ. ಆದರು ಕಲಾ ಸೇವೆ ನಿಂತಿಲ್ಲ. ಕಲೆಯೇ ಕುಟುಂಬ ಅಂತ ಜೀವನ ಸಾಗಿಸುತ್ತಿದ್ದಾರೆ.