ಜಿಲ್ಲೆ

ಅಂಧ ವಿದ್ಯಾರ್ಥಿ ಕೃಷ್ಣಾ ಬನ್ನಿದಿನ್ನಿ ಸನ್ಮಾನ

ಬಾಗಲಕೋಟೆ: ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಶ್ರೀಕೃಷ್ಣಾ ಶಿವಾನಂದ ಬನ್ನಿದಿನ್ನಿ, ಈತನು ಶೇ. 91 ಅಂಕಗಳನ್ನು ಪಡೆದು ಅಂಧರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಂಗುಲಾಬಿ ಹಾಗೂ ಇಂಗಳೆ ಮಾರ್ಗ ಚಲನಚಿತ್ರ ನಿರ್ಮಾಪಕ ಘನಶ್ಯಾಂ ಭಾಂಡಗೆಯವರು ಮತ್ತಿಕಟ್ಟಿ ಗ್ರಾಮದ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಯ ತಂದೆ ತಾಯಿ ಹಾಗು ಕುಟುಂಬಸ್ಥರು ಉಪಸ್ಥಿತರಿದ್ದರು.