ಕೋಲಾರ ತಾಲೂಕಿನ ಅಂದ್ರಹಳ್ಳಿಯ ಬೆಟ್ಟದ ಮೇಲಿನ ಶ್ರೀಸೂರ್ಯ ಮಲ್ಲೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಯೋಗ ನಮಸ್ಕಾರ ಆಯೋಜಿಸಿದ್ದು, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ವಕೀಲರ ಭವನ ಶಾಖೆಯ ಯೋಗ ಶಿಕ್ಷಕರಾದ ಮಾರ್ಕೊಂಡಪ್ಪ, ಶ್ರೀನಿವಾಸ್, ಯೋಗ ಬಂಧುಗಳಾದ ಉಮಾಶಂಕರ್, ಚಂದ್ರು, ಮುರಳಿ ಇತರರು ಇದ್ದರು.  
ಜಿಲ್ಲೆ

ಅಂದ್ರಹಳ್ಳಿ ಬೆಟ್ಟದಲ್ಲಿ ಯೋಗ

ಕೋಲಾರ: ತಾಲೂಕಿನ ಅಂದ್ರಹಳ್ಳಿ ಬೆಟ್ಟದ ಮೇಲಿನ ಶ್ರೀಸೂರ್ಯ ಮಲ್ಲೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥ ಯೋಗ ನಮಸ್ಕಾರ ಮಾಡಲಾಯಿತು.
ಭಾನುವಾರ ಮುಂಜಾನೆ ೫ ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸೂರ್ಯ ನಮಸ್ಕಾರ, ಗಣಪತಿ ನಮಸ್ಕಾರ, ಷಣ್ಮುಖ ನಮಸ್ಕಾರ, ಶಿವ ನಮಸ್ಕಾರ, ಹನುಮ ನಮಸ್ಕಾರ, ದುರ್ಗಾ ನಮಸ್ಕಾರ, ವಿಷ್ಣು ನಮಸ್ಕಾರವನ್ನು ಯೋಗ ಬಂಧುಗಳು ಮಾಡಿದರು.
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ವಕೀಲರ ಭವನ ಶಾಖೆಯ ಯೋಗ ಶಿಕ್ಷಕರಾದ ಮಾರ್ಕೊಂಡಪ್ಪ, ಶ್ರೀನಿವಾಸ್, ಯೋಗ ಬಂಧುಗಳಾದ ಉಮಾಶಂಕರ್, ಚಂದ್ರು, ಮುರಳಿ, ಋಷಿಲ್, ಬೀಬಿಜಾನ್, ರಾಜೇಶ್ವರಿ, ಲತಾ, ಆಶಾ, ರಾಣಿ, ಅಮಲಾ ಮತ್ತಿತರರು ಪಾಲ್ಗೊಂಡಿದ್ದರು.