ಜಿಲ್ಲೆ

ಅಂತಾರಾಷ್ಟ್ರೀಯ ಚೆಸ್ ಸ್ಪರ್ಧೆಗೆ ಭರತ್ ಆಯ್ಕೆ

ಸಿದ್ದಾಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಭರತ್ ಹೆಗಡೆ ದೊಡ್ಮನೆ ಗುಜರಾತಿನಲ್ಲಿ ಜರುಗಿದ 23ನೇ ರಾಷ್ಟ್ರೀಯ ಚೆಸ್ ಚಾಂಪಿಯನ್​ಶಿಪ್​ನಲ್ಲಿ ಪ್ರಥಮ ಸ್ಥಾನ ಪಡೆದು ಪೋಲಂಡ್​ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದಾನೆ. ಈತ ದೊಡ್ಮನೆಯ ರಾಮನಾಥ ಹೆಗಡೆ ಹಾಗೂ ಲತಾ ಹೆಗಡೆ ಅವರ ಪುತ್ರ.