ರಾಯಚೂರು ನಗರದಲ್ಲಿ ಜರುಗಿದ ಎರಡು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆಂಧ್ರದ ಪ್ರಶಾಂತಕುಮಾರನನ್ನು ಗುರುವಾರ ಬಂಸಿ 8.55 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬಂತನೊಂದಿಗೆ ಡಿವೈಎಸ್ಪಿ ಸತ್ಯನಾರಾಯಣರಾವ್, ಪಶ್ಚಿಮ ವೃತ್ತದ ಸಿಪಿಐ ನಾಗರಾಜ ಮೇಕಾ, ನೇತಾಜಿನಗರ ಠಾಣೆ ಪಿಎಸ್‌ಐ ಲಕ್ಷ್ಮಿ, ಸಿಬ್ಬಂದಿಗಳಾದ ಗೌಸ್‌ಪಾಷಾ, ಅಶೋಕ, ಜಾರ್ ಸಾದಿಕ್, ಮಲ್ಲಪ್ಪ, ಅರುಣಕುಮಾರ, ವಿಶ್ವನಾಥ, ಅಜೀಜ್ ಅಲಿ, ಗಿರೀಶ್, ಅಮೀಮ್ ಪಾಷಾ, ಪ್ರಭು ಪಾಟೀಲ್ ಇದ್ದಾರೆ. 
ಜಿಲ್ಲೆ

ಅಂತಾರಾಜ್ಯ ಕಳ್ಳನ ಬಂಧನ: ಚಿನ್ನಾಭರಣ ವಶ

ರಾಯಚೂರು: ಜಿಲ್ಲೆಯಲ್ಲಿ ಜರುಗಿದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ನೇತಾಜಿನಗರ ಠಾಣೆ ಪೊಲೀಸರು ಬಂಸುವಲ್ಲಿ ಯಶಸ್ವಿಯಾಗಿದ್ದು, ಬಂತನಿಂದ 8.55 ಲಕ್ಷ ರೂ. ವೌಲ್ಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಪಶ್ವಿಮ ಕೋಡಿಪಲ್ಲಿ ಗ್ರಾಮದ ಪ್ರಶಾಂತಕುಮಾರ ಅಲಿಯಾಸ್ ಶ್ರೀನಿವಾಸನನ್ನು ಗುರುವಾರ ಬಂಸಿ ವಿಚಾರಣೆಗೆ ಒಳಪಡಿಸಿದಾಗ ನೇತಾಜಿನಗರ ಠಾಣೆ ಮತ್ತು ಸದರ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ನಡೆದಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಬಂತನಿಂದ 7.30 ಲಕ್ಷ ರೂ. ವೌಲ್ಯದ 120 ಗ್ರಾಂ ಚಿನ್ನಾಭರಣ ಮತ್ತು 1.25 ಲಕ್ಷ ರೂ. ವೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ರಾಯಚೂರು ಜಿಲ್ಲೆಯಲ್ಲದೆ ಯಾದಗಿರಿ ಮತ್ತು ಆಂಧ್ರದಲ್ಲಿ ಜರುಗಿದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಪಶ್ಚಿಮ ವೃತ್ತದ ಸಿಪಿಐ ನಾಗರಾಜ ಮೇಕಾ, ನೇತಾಜಿನಗರ ಠಾಣೆ ಪಿಎಸ್‌ಐ ಲಕ್ಷ್ಮಿ, ಸಿಬ್ಬಂದಿಗಳಾದ ಗೌಸ್‌ಪಾಷಾ, ಅಶೋಕ, ಜಾರ್ ಸಾದಿಕ್, ಮಲ್ಲಪ್ಪ, ಅರುಣಕುಮಾರ, ವಿಶ್ವನಾಥ, ಅಜೀಜ್ ಅಲಿ, ಗಿರೀಶ್, ಅಮೀಮ್ ಪಾಷಾ, ಪ್ರಭು ಪಾಟೀಲ್ ತಂಡ ಕಳ್ಳನನ್ನು ಬಂಸುವಲ್ಲಿ ಯಶಸ್ವಿಯಾಗಿದ್ದು, ಎಸ್ಪಿ ಬಿ.ನಿಖಿಲ್ ತಂಡಕ್ಕೆ ವಿಶೇಷ ಬಹುಮಾನ ಘೋಷಣೆ ಮಾಡಿದ್ದಾರೆ.