ಚಿತ್ರದುರ್ಗ: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು, ನಗ-ನಗದು ಕಳವು ಮಾಡುತ್ತಿದ್ದು ಅಂತರಾಜ್ಯ ಖದೀಮನನ್ನು ಹಿರಿಯೂ ರು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ ಅವರು,ಹಿರಿಯೂರು ನಗರ,ಗ್ರಾಮಾಂತರ ಠಾಣೆ ವ್ಯಾಪ್ತಿ ಸೇರಿದಂತೆ ಚಿತ್ರದುರ್ಗ ಹಾಗೂ ರಾಜ್ಯದ ನಾನಾ ಜಿಲ್ಲೆಗಳು ಮತ್ತು ಆಂಧಪ್ರದೇಶದಲ್ಲಿ ಕಳವು ಮಾಡಿ ದ್ದ ಆರೋಪಿ ಬಳ್ಳಾರಿಯ ಹನುಮಂತ ಅಲಿಯಾಸ್ ಕರಿಯ ಹನುಮಂತ(26)ನನ್ನು ಈಚೆಗೆ ಬೆಂಗಳೂರಲ್ಲಿ ಬಂಧಿಸಿ ಆತನಿಂದ ಒಟ್ಟು 70.79 ಲಕ್ಷ ರೂ.ಮೌಲ್ಯದ 1.30 ಕೆಜಿ ಚಿನ್ನಾಭರಣ,ನಗದು ಹಾಗೂ ನಗದು,2 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಗಾರೆ ಕೆಲಸ ಮಾಡುತ್ತಿದ್ದ ಈತ ಕದ್ದ ಬೈಕ್‌ಗಳಲ್ಲಿ ತಿರುಗಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ. ಹಿರಿಯೂರಿ ನ ಚಳ್ಳಕೆರೆ ರಸ್ತೆ ಮನೆಯೊಂದರಲ್ಲಿ 121 ಗ್ರಾಂ.ಚಿನ್ನಾಭರಣ,1.75 ಲಕ್ಷ ರೂ.ನಗದು ಕಳವು ಮಾಡಿದ್ದ. ಈತನ ವಿರುದ್ಧ ಹಿರಿಯೂರು ನ ಗರ ಪೊಲೀಸ್ ಠಾಣೆಯಲ್ಲಿ-8,ಗ್ರಾಮಾಂತರ-5,ಹೊಸದುರ್ಗ-3,ಅಬ್ಬಿನಹೊಳೆ-1,ಚಿತ್ರದುರ್ಗ ಬಡಾವಣೆ-1 ಹಾಗೂ ಬಳ್ಳಾರಿ ಕೌ ಲ್‌ಬಜಾರ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ. ಇವುಗಳ ಮೂರು ಬೈಕ್ ಕಳವು ಪ್ರಕರಣಗಳು ಸೇರಿವೆ.
ಶಿವಮೊಗ್ಗ-1,ಕೊಪ್ಪಳ-2 ಹಾಗೂ ಆಂಧ್ರದ ಆಧೋನಿಯಲ್ಲಿ -1 ಮನೆಗಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ರಾಜ್ಯ ದ ವಿವಿಧ ಠಾಣೆಗಳಲ್ಲಿ 12 ವಾರೆಂಟ್‌ಗಳಿವೆ. ಈವರೆಗೂ ತಲೆ ಮರೆಸಿಕೊಂಡು ಕೃತ್ಯ ಎಸಗುತ್ತಿದ್ದ ಈತನ ಪತ್ತೆಗೆ ಹಿರಿಯೂರು ಡಿವೈಎಸ್‌ಪಿ ಎಸ್.ಚೈತ್ರಾ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು
ಹಿರಿಯೂರು ನಗರ ಠಾಣೆ ಪಿಐ ರಾಘವೇಂದ್ರಕಾಂಡಿಕೆ,ಹೊಸದುರ್ಗ ಪಿಎಸ್‌ಐ ಭೀಮನಗೌಡ ಪಾಟೀಲ,ಬೆರಳಚ್ಚು ವಿಭಾಗದ ಪಿ ಎಸ್‌ಐ ವಿಶ್ವನಾಥ್,ತಾಂತ್ರಿಕ ವಿಭಾಗದ ರಾಘವೇಂದ್ರ ಸೇರಿದಂತೆ ಇತರೆ ಸಿಬ್ಬಂದಿ ಇದ್ದ ತಂಡ ಆರೋಪಿಯನ್ನು ಬಂಧಿಸಿ,ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ತಂಡಕ್ಕೆ ಸೂಕ್ತ ಬಹುಮಾನ ನೀಡುವುದಾಗಿ ಎಸ್‌ಪಿ ತಿಳಿಸಿದರು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಇದ್ದರು.
ಪೋಟೊಗಳಿವೆ
1.(ಸಿಟಿಡಿ 24 ಆರೋಪಿ ಹನುಮಂತ) ಆರೋಪಿ ಹನುಮಂತ