ಜಿಲ್ಲೆ

ಅಂತರ್‌ಜಲ ಶುದ್ಧಿಯ ಅಗತ್ಯವಿದೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಮಳೆಯಾಧಾರಿತ ಜಿಲ್ಲೆ ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳ ಬೇಕಿದೆ ಎಂದು ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಹೇಳಿದರು.

ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ನ್ಯಾನೋ ಮತ್ತು ಸಿಡಿಐ-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಅಂತರ್‌ಜಲ ಶುದ್ಧಿಕರಣ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು,ಲಭ್ಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಂತರ್‌ಜಲವನ್ನು ಶುದ್ಧಿಕರಿಸಿ ಕುಡಿಯಲು ಬಳಸ ಬಹುದಾಗಿದೆ ಎಂದರು.

ರಾಜ್ಯಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ.ಬಿ.ನಾಗಪ್ಪ ಮಾತನಾಡಿ,ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿ ನೀರನ್ನು ಆಶ್ರಯಿಸಲಾಗಿದೆ. ನಾನಾ ಕಾರಣಗಳಿಂದ ಕೊಳವೆ ಬಾವಿ ನೀರಿನ ಗುಣಮಟ್ಟ ಕಡಿ ಮೆಯಾಗುತ್ತಿದ್ದು,ಗುಣಮಟ್ಟ ಹೆಚ್ಚಿಸಲು ನ್ಯಾನೋ ಮತ್ತು ಸಿಡಿಐ-ಹೈಬ್ರಿಡ್ ತಂತ್ರಜ್ಞಾನ ಬಳಸಬಹುದಾಗಿದೆ ಎಂದರು. ವಿಭಾಗದ ಮು ಖ್ಯಸ್ಥ ಡಾ.ಜೆ.ಎಂ.ಶ್ರೀಶೈಲ,ಪ್ರೊ.ವಿ.ಅನುಷಾ,ಪ್ರೊ.ಎಂ.ಮೀನಾಕ್ಷಿ ಮತ್ತಿತರರು ಇದ್ದರು.