ಬ್ಯಾಂಕ್ ಆಫ್ ಇಂಡಿಯಾ, ಬೆಳಗಾವಿ ವಲಯದ ಸಹಾಯಕ ಮಹಾಪ್ರಬಂಧಕ ಅರುಣಕುಮಾರ ಝಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಜಿಲ್ಲೆ

ಅಂತರ್ ಕಾಲೇಜ ವ್ಯವಸ್ಥಾಪನೆ ಮೇಳ ಆಯೋಜನೆ

ಬೆಳಗಾವಿ: ಭರತೇಶ್ ಎಂಬಿಎ ಮಹಾವಿದ್ಯಾಲಯದಲ್ಲಿ ಇತ್ತಿಚಿಗೆ ಒಂದು ದಿನದ ಅಂತರ್ ಕಾಲೇಜು ವ್ಯವಸ್ಥಾಪನೆ ಮೇಳ-2023 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ 20 ರಾಷ್ಟ್ರಗಳ ಸಮ್ಮೀಲನದ ಅಧ್ಯಕ್ಷತೆಯನ್ನು ಭಾರತ ದೇಶ ವಹಿಸಿದ್ದು ಇದರ ಸ್ಮರಣೆಯಲ್ಲಿ ವಸುಧೈವ ಕುಟುಂಬಕಂ ಅಥವಾ ಒಂದು ಭೂಮಿ. ಒಂದು ಕುಟುಂಬ. ಒಂದು ಭವಿಷ್ಯ ಎಂಬ ಯೋಜನೆಯನ್ನು ಆಧರಿಸಿ ಈ ಮೇಳವನ್ನು ನಡೆಸಲಾಯಿತು.
ಈ ಮೇಳದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಗುರಿ ಮತ್ತು ಅವರ ನಿರ್ವಹಣಾ ಕೌಶಲ್ಯ, ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲಾಯಿತು .
ಭರತೇಶ ಎಂಬಿ.ಎ. ಮಹಾವಿದ್ಯಾಲಯದ ನಿರ್ದೆಶಕ ಡಾ.ಪ್ರಸಾದ್ ದಡ್ಡಿಕರ್ ಅತಿಥಿಗಳನ್ನು ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಇಂಡಿಯಾ, ಬೆಳಗಾವಿ ವಲಯದ ಸಹಾಯಕ ಮಹಾಪ್ರಬಂಧಕರಾದ ಅರುಣಕುಮಾರ ಝಾ ಅವರು ಆಗಮಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಮ್ಯಾನೇಜ್‌ಮೆಂಟ್ ಅಧ್ಯಯನವನ್ನು ಮುಂದುವರಿಸಲು ಪ್ರೇರೇಪಿಸಿದರು. ಉದ್ಯೋಗದ ಮೂಲಭೂತ ಮತ್ತು ಕ್ರಿಯಾತ್ಮಕ ಅಂಶಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಮತ್ತು ಈ ಬದಲಾಗುತ್ತಿರುವ ಜಗತ್ತಿನಲ್ಲಿ ಕಲಿಕಾ ಮನೋಭಾವವನ್ನು ಇಟ್ಟುಕೊಳ್ಳಲು ವಿದ್ಯಾರ್ಥಿಗಳಿಗೆ ಒತ್ತಾಯಿಸಿದರು.
ಗ್ರಾಹಕರಿಗೆ ಕಾರ್ಪೊರೇಟ್ ಪ್ರಪಂಚದಿಂದ ಮೌಲ್ಯವರ್ಧನೆ ಅಗತ್ಯವಿರುತ್ತದೆ. ಭರತೇಶ ಶೀಕ್ಷಣ ಸಂಶ್ಥೆಯ ಉಪಾಧ್ಯಕ್ಷರಾದ ಶ್ರೀಪಾಲ ಖೇಮಲಾಪುರೆ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ, ಜೈನ್ ಇಂಜಿನಿಯರ್ಸ್ ಲಿಮಿಟೆಡ್ ಅನುಪಮಾ ಶಿರಹಟ್ಟಿ ಗೌರವ ಅತಿಥಿಗಳಾಗಿದ್ದರು.
ಆಡಳಿತ ಮಂಡಳಿ ಅಧ್ಯಕ್ಷ ಮಹಾವೀರ ಉಪಾಧ್ಯೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯ ವಿವಿಧ ಯುಜಿ ಸಂಸ್ಥೆಗಳ ಟೀಮ್‌ಗಳು ಭಾಗವಹಿಸಿದ್ದವು. ಡಾ.ಪದ್ಮಪ್ರಿಯಾ ಕತಗಲ ಮತ್ತು ಪ್ರೊ. ರಂಜನಾ ಚೌಗುಲೆ ಕಾರ್ಯಕ್ರಮವನ್ನು ನಿರೂಪಿಸಿದರು.