ಜಿಲ್ಲೆ

ಅಂತರಾಳ ತಲುಪುತ್ತಿದ್ದ ಬೋಧನೆ : ಪುರುಷೋತ್ತಮಾನಂದಜೀ ಬಗ್ಗೆ ಸ್ವಾಮಿ ನಿರ್ಭಯಾನಂದಜೀ ಉಪನ್ಯಾಸ

ತುಮಕೂರು: ಪೂಜ್ಯ ಸ್ವಾಮಿ ಪುರುಷೋತ್ತಮಾನಂದಜೀ ಅವರು ವ್ಯಕ್ತಿತ್ವದ ಮೂಲಕ ಜಗತ್ತಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಅವರ ಸ್ಫೂರ್ತಿಯುತ ಬೋಧನೆ ವ್ಯಕ್ತಿತ್ವದಲ್ಲಿ ಪರಿವರ್ತನೆ ತರುತ್ತಿತ್ತು ಎಂದು ಗದಗ&ಬಿಜಾಪುರ ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜೀ ಹೇಳಿದರು.

ನಗರದ ರಾಮಕೃಷ್ಣ&ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ "ಪರುಷಮಣಿ&ಯತಿಶಿರೋಮಣಿ' ಶ್ರೀ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ, ಸ್ವಾಮಿ ಪುರುಷೋತ್ತಮಾನಂದಜೀ&ಬೋಧನೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪುರುಷೋತ್ತಮಾನಂದಜೀ ಅವರ ಓಜಸ್ವೀ ವ್ಯಕ್ತಿತ್ವ. ಅವರ ಬೋಧನೆಗಳು ಹೃದಯಾಂತರಾಳವನ್ನು ಪ್ರವೇಶಿಸುತ್ತಿದ್ದವು. ಅವರ ಶಿಕ್ಷಣ ಬೋಧನೆಗೆ ಸೀಮಿತವಾಗಿರಲಿಲ್ಲ. ಅದರಲ್ಲಿ ಸ್ಫೂರ್ತಿ ತುಂಬುವ, ಮಂತ್ರಮುಗ್ಧರನ್ನಾಗಿಸುವ, ಪ್ರಭಾವಿತಗೊಳಿಸುವ ಶಕ್ತಿ ಇರುತ್ತಿತ್ತು ಎಂದರು.

ಸಂಟನಾ ಚತುರ ಸ್ವಾಮಿ ಪುರುಷೋತ್ತಮಾನಂದಜೀ ಎಂಬ ವಿಷಯದ ಕುರಿತು ಮಾತನಾಡಿದ ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದಜೀ, ಪುರುಷೋತ್ತಮಾನಂದಜೀ ಅವರು ಚಳವಳಿಯೋಪಾದಿಯಲ್ಲಿ ಸಂಟನೆ ಮಾಡಿದರು. ಅವರದ್ದು ಪರಿವರ್ತನೆಯ ನಾಯಕತ್ವ. ಅವರಿಂದ ಪ್ರೇರಣೆ ಪಡೆದ ಯುವಜನತೆಯಿಂದ ರಾಜ್ಯಾದ್ಯಂತ ಸುಮಾರು ಇಪ್ಪತ್ತೆದು ರಾಮಕೃಷ್ಣ ವಿವೇಕಾನಂದ ಆಶ್ರಮಗಳು ಸ್ಥಾಪಿತವಾಗಿವೆ. ಅವರು ಸ್ಥಾಪಿಸಿದ ಸತ್ಸಂಗ ಕೇಂದ್ರಗಳು, ಯುವಕ ಸಂಗಳು, ಬಾಲಕ ಸಂಗಳು ಇಂದಿಗೂ ಕ್ರಿಯಾಶೀಲವಾಗಿವೆ ಎಂದರು.

ಸಂಕೀರ್ತನ&ಹರಿಕಾರ ಪರಮಪೂಜ್ಯ ಸ್ವಾಮಿ ಪುರುಷೋತ್ತಮಾನಂದಜೀ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಸ್ವಾಮಿ ಯೋಗೇಶ್ವರಾನಂದಜೀ, ಉತ್ತಮ ಸಂಗೀತ, ಸಾಹಿತ್ಯದಿಂದ ಒಡಗೂಡಿರುವ ಸಂಕೀರ್ತನೆಯು ಭಕ್ತಿಭಾವ ಮೂಡಿಸಿ ಆತ್ಮಸಾಾತ್ಕಾರದೆಡೆಗೆ ಒಯ್ಯುತ್ತದೆ. ಸ್ವಾಮಿ ಪುರುಷೋತ್ತಮಾನಂದಜೀ ಅವರ ಸಂಕೀರ್ತನೆಯಿಂದ ಆಧ್ಯಾತ್ಮಿಕ ಜಾಗೃತಿಯುಂಟಾಗುತ್ತಿತ್ತು. ಭಕ್ತಜನರು ಮಂತ್ರಮುಗ್ಧರಾಗಿ ಭಾವಪರವಶರಾಗುತ್ತಿದ್ದರು. ಅವರು ದಿವ್ಯತ್ರಯರ ಸಂದೇಶಗಳನ್ನು ಸಂಕೀರ್ತನೆಯ ಮೂಲಕ ಜಗತ್ತಿಗೆ ಸಾರಿದ ಮಹಾನ್​ ಸಂತರು ಎಂದರು.

ಭಕ್ತಜನಪೋಷಕ ಸ್ವಾಮಿ ಪುರುಷೋತ್ತಮಾನಂದಜೀ ಎಂಬ ವಿಚಾರದ ಕುರಿತು ರಾಣೆಬೆನ್ನೂರಿನ ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ, ಸ್ವಾಮಿ ಪುರುಷೋತ್ತಮಾನಂದಜೀ ಅವರ ಆದರ್ಶ ಬದುಕಿನ ಕುರಿತು ಬೆಂಗಳೂರಿನ ರಾಮಕೃಷ್ಣ ವೇದಾಂತ ಆಶ್ರಮದ ಅಧ್ಯಕ್ಷ ಸ್ವಾಮಿ ಅಭಯಾನಂದಜೀ, ಸ್ವಾಮಿ ಪುರುಷೋತ್ತಮಾನಂದಜೀ ಅವರ ಸಾಹಿತ್ಯದ ಕುರಿತು ಬೆಂಗಳೂರಿನ ಸಾಹಿತಿ ರು ವಂಕಟಾಚಲಯ್ಯ ಉಪನ್ಯಾಸ ನೀಡಿದರು.

ಶಾಸಕ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್​, ಶಿಕ್ಷಣತ ಸರ್ವೋದಯ ಶಿಕ್ಷಣ ಸಂಸ್ಥೆಯ ಸೀತಾರಾಮ್​, ಪಾಲಿಕೆ ಸದಸ್ಯ ವಿಷ್ಣುವರ್ಧನ, ಕಾಂತಮ್ಮ, ಡಾ.ರಮೇಶ್​ ಹಾಗೂ ಮಹಾವೀರ್​ ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಶಾರದಾ ಸೇವಾಶ್ರಮದ ಚಂದ್ರಿಕಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಬ್ರಮಣ್ಯ ನಾವಡ ನಿರೂಪಿಸಿ ವಂದಿಸಿದರು.