ಅಂತರಾಜ್ಯ ಮೊಬೈಲ್ ಕಳ್ಳನ ಬಂಧನ
101 ಮೊಬೈಲ್ ವಶಕ್ಕೆ ಪಡೆದ ಪೊಲೀಸರು
ಚಿಕ್ಕೋಡಿ: ವಿವಿಧ ಕಂಪನಿಯ ನೂರಕ್ಕೂ ಅಧಿಕ ಮೊಬೈಲ್ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.
ತೆಲಂಗಾಣದ ನಿಜಾಮುದಿನ್ ಜಿಲ್ಲೆಯ ಬಾನಸವಾಡಿಯ ನಿವಾಸಿ ನವೀನ ಸಂಪತ ಬಂಧಿತ ಆರೋಪಿ,ಈತ ಮೊಬೈಲ್ ಗಳನ್ನ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಪೊಲೀಸರು ಕಾರು ತಪಾಸಣೆ ವೇಳೆ ಮೊಬೈಲ್ ಪತ್ತೆಯಾಗಿವೆ.
ಬಂಧಿತನಿಂದ ವಿವೋ,ಓಪೊ,ಸ್ಯಾಮ್‌ಸಂಗ್, ಒನ್ ಪ್ಲಸ್ ಸೇರಿದಂತೆ 101 ಮೊಬೈಲ್ ಸೇರಿ 11,79,000 ಮೌಲ್ಯದ ಮೊಬೈಲ್ ಹಾಗೂ ಒಂದು ಕಾರ್ ಪೊಲೀಸರು ವಶ ಪಡೆಸಿಕೊಂಡಿದ್ದಾರೆ.
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.