ಎಚ್.ಡಿ. ಕೋಟೆ: ತಾಲೂಕಿನ ಅಂತರಸಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕವಿತಾ ಜಯಣ್ಣ ಅವಿರೋಧವಾಗಿ ಆಯ್ಕೆಯಾದರು.
ಅಂತರಸಂತೆ ಗ್ರಾ.ಪಂ. ಕಚೇರಿಯಲ್ಲಿ ಬುಧವಾರ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಕವಿತಾ ಜಯಣ್ಣ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಜಿ.ಮಂಜುನಾಥ್ ಪ್ರಕಟಿಸಿದರು.
ಅಧ್ಯಕ್ಷೆ ರೇಖಾ ಗುರುಸ್ವಾಮಿ, ಪಿಡಿಒ ಕೆ.ಪಿ.ಸುರೇಶ್, ಕಾರ್ಯದರ್ಶಿ ಕೇಶವಮೂರ್ತಿ, ಲೆಕ್ಕ ಸಹಾಯಕಿ ಭಾಗ್ಯಾ, ಸಿಬ್ಬಂದಿ ಕುಮಾರ್, ಶಿವಣ್ಣ, ಕುಮಾರ್, ಸದಸ್ಯರಾದ ಮಾರುತಿ, ಎಂ.ಸುಬ್ರಮಣ್ಯ, ಕಲೀಂ ಪಾಷ, ರೂಪಾ ಸುಬ್ರಮಣ್ಯ, ಪುಟ್ಟಮಲ್ಲಿ ಸುರೇಶ್, ರತ್ಮಮ್ಮ, ಲೋಲಮ್ಮ ಕಾಂತನಾಯಕ, ನಸ್ರೀನ್ ತಾಜ್ ಅಪ್ಸರ್ ಖಾನ್, ಸೋಮೇಶ್, ಶಿವಲಿಂಗನಾಯಕ, ದೊರೆಸ್ವಾಮಿ, ಮುಖಂಡರಾದ ಎ.ಪಿ.ಕೃಷ್ಣ, ಅಭಿ, ಸುರೇಂದ್ರ, ವೆಂಕಟೇಶ್ ಬಂಗ್ಲಿ, ಸುಬ್ರಮಣ್ಯ, ಅಶೋಕ್, ಗಣೇಶ್ ಇತರರಿದ್ದರು.