ಜಿಲ್ಲೆ

ಅಂತರವಾಣಿ ಕೇಂದ್ರಕ್ಕೆ ರಾಷ್ಟ್ರ ಪ್ರಶಸ್ತಿ

ಕಲಬುರಗಿ: ನಗರದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿದ್ದ ರಾಷ್ಟç ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದೆ.
೫೦೦ಕ್ಕೂ ಅಧಿಕ ಸಮುದಾಯ ರೇಡಿಯೋ ಕೇಂದ್ರಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಸುಸ್ಥಿರತೆಯ ಮಾದರಿ ವಿಭಾಗದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ತೃತೀಯ ಬಹುಮಾನ ಪಡೆದಿದೆ. ೫೦,೦೦೦ ರೂ ನಗದು, ಪ್ರಶಂಸಾ ಮತ್ತು ಪ್ರಶಸ್ತಿ ಪತ್ರ ಹೊಂದಿದೆ ಎಂದು ಕೇಂದ್ರದ ನಿರ್ದೇಶಕ ಡಾ.ಶಿವರಾಜ ಶಾಸ್ತಿç ಹೇರೂರ ತಿಳಿಸಿದ್ದಾರೆ.
ವಿಷಯ ರಚನೆ, ಬ್ಯಾಂಕಿAಗ್, ಸಮುದಾಯ ಭಾಗವಹಿಸುವಿಕೆ, ಸೌಂಡ್ ಫೈನಾನ್ಶಿಯಲ್ ಸಸ್ಟೆನಬಿಲಿಟಿ ಮತ್ತು ತಾಂತ್ರಿಕ ಬೆಂಬಲ ಸೇರಿ ವಿವಿಧ ಮಾನದಂಡಗಳನ್ನು ಪರಿಗಣಿಸಲಾಗಿದೆ. ಅಂತರವಾಣಿಯು ನಿತ್ಯ ನೇರ್ ಫೋನ್ ಇನ್, ಉತ್ತಮ ಸ್ಟುಡಿಯೋ, ಹೊರಾಂಗಣ ಕಾರ್ಯಕ್ರಮವನ್ನು ಮಾಡಿದೆ. ಈ ಕೇಂದ್ರದ ಸ್ಟೋರೇಜ್‌ನಲ್ಲಿ ದಾಖಲೆಯ ೩೬ ಸಾವಿರ ಗಂಟೆಗಳ ಕಾರ್ಯಕ್ರಮವಿದ್ದು, ನಿತ್ಯ ೧೦ ಗಂಟೆ ಪ್ರಸಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಬೆಂಬಲವಿಲ್ಲದೆ, ರಾಷ್ಟಿçÃಕೃತ ಬ್ಯಾಂಕ್‌ನಲ್ಲಿ ೫೦ ಲಕ್ಷ ರೂ. ಸ್ಥಿರ ಠೇವಣಿ ಇಟ್ಟಿದ್ದು, ಅದರ ಬಡ್ಡಿಯಲ್ಲಿ ವೆಚ್ಚ ನಿರ್ವಹಿಸಿ, ಸ್ವಾವಲಂಬಿಯಾಗಿದೆ. ಕೇಂದ್ರ ಸರ್ಕಾರ ಸೇರಿ ಸ್ಥಳೀಯ ಜಾಹೀರಾತುಗಳ ಮೂಲಕ ಆದಾಯ ಉತ್ಪಾದಿಸಿದೆ. ೩೦ ಕಿ.ಮೀ. ತರಂಗಾAತರ ವ್ಯಾಪ್ತಿ ಒಳಗೊಂಡಿದ್ದು, ಈ ಭಾಗದ ೧೦೦ಕ್ಕೂ ಹೆಚ್ಚು ಹಳ್ಳಿಗಳ ಕೇಳುಗರಿಗೆ ಪ್ರಸಾರ ಒದಗಿಸುತ್ತದೆ. ಸಂಸ್ಕೃತಿ, ಜಾನಪದ, ಪರಿಸರ ಸಮಸ್ಯೆಗಳು, ಶರಣಬಸವೇಶ್ವರರ ಸುಪ್ರಭಾತ, ಸಾಹಿತ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಕಾರ್ಯಕ್ರಮ ಪ್ರಸಾರ ಮಾಡುತ್ತದೆ. ರೇಡಿಯೋ ಅಂತರವಾಣಿ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಪ್ರಪಂಚದಾದ್ಯAತ ಕೇಳುಗರಿಗೆ ೨೪*೭ ಆಧಾರದ ಮೇಲೆ ಲಭ್ಯವಿದೆ. ರೇಡಿಯೋದ ಎಲ್ಲ ಮಾನದಂಡಗಳನ್ನು ಪರಿಗಣಿಸಿ ಪ್ರಶಸ್ತಿ ಬಂದಿದೆ ಎಂದು ತಿಳಿಸಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಣಿ ಅಪ್ಪ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಡಾ. ಶಿವರಾಜ ಶಾಸ್ತಿçà ಹೇರೂರ ಅವರನ್ನು ಅಭಿನಂದಿಸಿದ್ದಾರೆ.