Oplus_16908288 
ಜಿಲ್ಲೆ

ಅಂತರ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಕಾವೇರಿ ಕಾಲೇಜಿಗೆ ದ್ವಿತೀಯ ಸ್ಥಾನ

ವಿರಾಜಪೇಟೆ: ಸೆಪಿಎಂಟ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜು 5ಂ ಸೈಡ್ ರಿಂಕ್ ಹಾಕಿ ಪಂದ್ಯಾವಳಿ ವಿರಾಜಪೇಟೆ ಕಾವೇರಿ ಕಾಲೇಜಿನ ಹಾಕಿ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದೆ.

ಒಟ್ಟು 21 ತಂಡಗಳು ಪಾಲ್ಗೊಂಡಿದ್ದ ಕ್ರೀಡಾಕೂಟದಲ್ಲಿ ಅಂತಿಮ ಫೈನಲ್ ಹಣಾಹಣಿ ವಿರಾಜಪೇಟೆ ಕಾವೇರಿ ಪದವಿ ಕಾಲೇಜಿ ಹಾಗೂ ಎಂ.ಎಂ.ಕಾಲೇಜು ಗದಗ ನಡುವೆ ನಡೆದು 6-7 ಒಂದು ಗೋಲಿನ ಅಂತರದಲ್ಲಿ ಸೋಲು ಅನುಭವಿಸಿತ್ತು. ಇದಕ್ಕೂ ಮೊದಲು ಲೀಗ್ ಹಂತದಲ್ಲಿ ರಾಮಯ್ಯ ಕಾಲೇಜನ್ನು 10-03, ವಿದ್ಯಾವಿಕಾಸ ಕಾಲೇಜನ್ನು 8-2, ಸೇಂಟ್ ಆನ್ಸ್ ಪದವಿ ಕಾಲೇಜನ್ನು 11-1 ಗೋಲುಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿತು. ಸೆಮಿ ಫೈನಲ್‌ನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜನ್ನು 3-2 ಗೋಲಿನಲ್ಲಿ ಸೋಲಿಸಿ ಅಂತಿಮವಾಗಿ ಫೈನಲ್ಸ್ ಗೆ ತಲುಪಿ ಎಂ.ಎಂ. ಕಾಲೇಜು ಗದಗದ ನಡುವೆ ನಡೆದ ಪಂದ್ಯದಲ್ಲಿ 6-7 ಗೋಲಿನ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡು ದ್ವಿತೀಯ ಸ್ಥಾನದೊಂದಿಗೆ 10 ಸಾವಿರ ನಗದು ವೈಯಕ್ತಿಕ ಪಾರಿತೋಷಕ ಹಾಗೂ ರನ್ನರ್ಸ್ ಟ್ರೋಫಿ ಪಡೆದುಕೊಂಡಿದೆ. ಪಂದ್ಯಾವಳಿಯಲ್ಲಿ ಹೆಚ್ಚು ಗೋಲು ದಾಖಲಿಸಿದ ಸಾಧನೆಯನ್ನು ವಿರಾಜಪೇಟೆ ಕಾವೇರಿ ಕಾಲೇಜಿನ ಎ.ಎ.ನಾಚಪ್ಪ ಮಾಡಿದ್ದಾರೆ.

ಪ್ರಾಂಶುಪಾಲ ಬೆನೆಡಿಕ್ಟ್ ಆ ಸಲ್ದಾನ ಕಾಲೇಜಿನ ಹಾಕಿ ತಂಡ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ತಮ್ಮಯ್ಯ ಅವರನ್ನು ಅಭಿನಂದಿಸಿದರು.