ಜಿಲ್ಲೆ

ಅಂತರ ಕಾಯ್ದುಕೊಳ್ಳಲು ಸೂಚನೆ

ರಾಣೆಬೆನ್ನೂರ: ತಾಲೂಕಿನ ಚಳಗೇರಿ ಗ್ರಾಮಕ್ಕೆ ಮಂಗಳವಾರ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಎಂದು ಸೂಚಿಸಿದರು.

ಈ ಕುರಿತು ಮಾ. 31ರಂದು ‘ವಿಜಯವಾಣಿ’ಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕ ಅರುಣಕುಮಾರ ಪೂಜಾರ, ಚಳಗೇರಿ

ಗ್ರಾ.ಪಂ.ಗೆ ಭೇಟಿ ನೀಡಿ, ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ. ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಗ್ರಾಮದಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿಕೊಂಡು ಓಡಾಡಲು ಸೂಚಿಸಬೇಕು. ದಿನಸಿ, ತರಕಾರಿ ಹಾಗೂ ಔಷಧ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗುರುತು ಹಾಕಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ನಂತರ ಗ್ರಾಮದ ತರಕಾರಿ, ದಿನಸಿ ಹಾಗೂ ಔಷಧ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕಲಾಯಿತು. ಗ್ರಾ.ಪಂ. ಪಿಡಿಒ ವೆಂಕಟೇಶ ಉಕ್ಕಡಗಾತ್ರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

ಕಂಟ್ರೋಲ್ ರೂಂ ಸ್ಥಾಪನೆ, ನೋಡಲ್ ಅಧಿಕಾರಿಗಳ ನೇಮಕ

ಹಾವೇರಿ: ಕರೊನಾ ವೈರಸ್ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತರ ನೇರ ನಿಯಂತ್ರಣದಲ್ಲಿ ಜಿಲ್ಲಾಮಟ್ಟದ ಕಂಟ್ರೋಲ್ ರೂಂ 08375-232902 ಸ್ಥಾಪಿಸಲಾಗಿದೆ. ಜತೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಅಧೀಕ್ಷಕರು ತಿಳಿಸಿದ್ದಾರೆ.

ದಿನದ 24ಗಂಟೆ ಜಿಲ್ಲಾ ಮಟ್ಟದ ಕಂಟ್ರೋಲ್ ರೂಂ ಕಾರ್ಯ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಅಬಕಾರಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಹಾಗೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಪ್ರಭಾರ ಅಬಕಾರಿ ಉಪ ಅಧೀಕ್ಷಕ ಹೊನ್ನಪ್ಪ ಓಲೇಕಾರ(9449597099) ಅವರನ್ನು ಜಿಲ್ಲಾಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಅಧಿಕಾರಿಗಳ ವಿವರ: ಹಾವೇರಿ ಉಪವಿಭಾಗದ (ಹಾವೇರಿ, ಹಾನಗಲ್ಲ, ಸವಣೂರ, ಶಿಗ್ಗಾಂವಿ) ಅಬಕಾರಿ ಉಪ ಅಧೀಕ್ಷಕ ಹೊನ್ನಪ್ಪ ಓಲೇಕಾರ (9449597099), ರಾಣೆಬೆನ್ನೂರ ಉಪವಿಭಾಗದ (ರಾಣೆಬೆನ್ನೂರ, ಬ್ಯಾಡಗಿ ಹಾಗೂ ಹಿರೇಕೆರೂರು) ಅಬಕಾರಿ ಉಪಅಧೀಕ್ಷಕ ಪರಶುರಾಮ ವಡ್ಡರ (9449597100), ಹಾವೇರಿ ವಲಯದ ಅಬಕಾರಿ ನಿರೀಕ್ಷಕ ಮಹೇಶಗೌಡ ಪಾಟೀಲ (7204476001), ಶಿಗ್ಗಾಂವಿ ಮತ್ತು ಸವಣೂರು ವಲಯ ಅಬಕಾರಿ ನಿರೀಕ್ಷಕ ಆರ್.ಐ. ಹೂಗಾರ (9449629510), ಹಾನಗಲ್ಲ ವಲಯ ಅಬಕಾರಿ ನಿರೀಕ್ಷಕ ಪರಶುರಾಮ ವಡ್ಡರ(9449597100), ರಾಣೆಬೆನ್ನೂರು ವಲಯ ಅಬಕಾರಿ ನಿರೀಕ್ಷಕ ಆನಂದ ಅಡಗಲ್(8147359889), ಬ್ಯಾಡಗಿ ವಲಯ ಅಬಕಾರಿ ನಿರೀಕ್ಷಕಿ ಜೆ.ಕೆ. ಶೀಲಾ(8861411339), ಹಿರೇಕೆರೂರು ವಲಯ ಅಬಕಾರಿ ಉಪನಿರೀಕ್ಷಕ ಮಲ್ಲಪ್ಪ ಕುಂದಗೋಳ(9241425881).

ಅಬಕಾರಿ ಅಕ್ರಮಗಳು ಏನಾದರೂ ಕಂಡುಬಂದಲ್ಲಿ ಜಿಲ್ಲಾಮಟ್ಟದ ಕಂಟ್ರೋಲ್ ರೂಂ 08375-232902 ಅಥವಾ ಮೇಲ್ಕಂಡ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಜಿಲ್ಲೆಯಲ್ಲಿ ಕೆಎಸ್​ಬಿಸಿಎಲ್ ಡಿಪೋ ಒಳಗೊಂಡಂತೆ ಎಲ್ಲ ರೀತಿಯ 166ಸನ್ನದುಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ದಿನದ 24ಗಂಟೆ ಕಂದಾಯ, ಪೊಲೀಸ್, ಆರೋಗ್ಯ ಮತ್ತು ಇತರ ಇಲಾಖೆಗಳ ವಿಪತ್ತು ನಿರ್ವಹಣೆ ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ ಅಕ್ರಮಗಳನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಉಪವಿಭಾಗ ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ನಡೆಸಿ ಕಳ್ಳಬಟ್ಟಿ ವ್ಯವಹಾರಗಳು ತಲೆ ಎತ್ತದಂತೆ ಹಗಲಿರುಳು ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ.

ಫ್ಲೈಯಿಂಗ್ ಸ್ಕಾ್ವಡ್ ರಚನೆ

ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ತಡೆಯಲು ಮುಂಜಾಗ್ರತ ಕ್ರಮವಾಗಿ ಹಾವೇರಿ ಉಪವಿಭಾಗದ ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕುಗಳಲ್ಲಿ ಫ್ಲೈಯಿಂಗ್ ಸ್ಕಾ್ವಡ್​ಗಳನ್ನು ರಚಿಸಿ ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ ಆದೇಶ ಹೊರಡಿಸಿದ್ದಾರೆ.

  • ಹಾವೇರಿ ತಾಲೂಕು: ಹಾವೇರಿ ಹೋಬಳಿಗೆ ಬಿಇಒ ಎಂ.ಎಚ್. ಪಾಟೀಲ (9480695248), ಕರ್ಜಗಿ ಹೋಬಳಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕುಡುಪಲಿ (8277931812), ಗುತ್ತಲ ಹೋಬಳಿಗೆ ಬಿಸಿಎಂ ವಿಸ್ತೀರ್ಣಾಧಿಕಾರಿ ವಾಲ್ಮೀಕಿ ನಾಯಕ (6361008343).
  • ಬ್ಯಾಡಗಿ ತಾಲೂಕು: ಬ್ಯಾಡಗಿ ಹೋಬಳಿಗೆ ತಾ.ಪಂ. ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ (9740090877), ಕಾಗಿನೆಲೆ ಹೋಬಳಿಗೆ ದೈಹಿಕ ಶಿಕ್ಷಣಾಧಿಕಾರಿ ಬಿ.ಎಚ್.ಎನ್. ರಾವಳ (9986630697).
  • ರಾಣೆಬೆನ್ನೂರ ತಾಲೂಕು: ರಾಣೆಬೆನ್ನೂರ ಹೋಬಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ರಾಮಕೃಷ್ಣ (9738968309), ಮೆಡ್ಲೇರಿ ಹೋಬಳಿಗೆ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ಎಂ.ಎಸ್. ನ್ಯಾಮತಿ (9611341933), ಕುಪ್ಪೇಲೂರು ಹೋಬಳಿಗೆ ವಲಯ ಅರಣ್ಯಾಧಿಕಾರಿ ರವಿ ಹುಲಕೋಟಿ (7019220876).
  • ಹಿರೇಕೆರೂರ ತಾಲೂಕು: ಹಿರೇಕೆರೂರ ಹೋಬಳಿಗೆ ಬಿಸಿಎಂ ತಾಲೂಕು ವಿಸ್ತೀರ್ಣಾಧಿಕಾರಿ ಕೆ. ಶಿವಮೂರ್ತಿ (9845185717), ಹಂಸಬಾವಿ ಹೋಬಳಿಗೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪಿ.ಬಿ. ನಿಂಗನಗೌಡ್ರ (9980087150).
  • ರಟ್ಟಿಹಳ್ಳಿ ತಾಲೂಕು: ಇಂಗಳಗೊಂದಿ, ಚಿಕ್ಕಯಡಚಿ, ಹುಲ್ಲತ್ತಿ, ನೇಸ್ವಿ, ಕುಂಚೂರು, ಮಕರಿ, ಕುಡಪಲಿ, ಕಡೂರು, ಕಣ್ವಿಸಿದ್ಧಗೇರಿ ಹೋಬಳಿಗಳಿಗೆ ತಾ.ಪಂ. ಇಒ ಕೆ.ಸಿ. ಮೋಹನಕುಮಾರ (9916863256), ಶಿರಗಂಬಿ, ಮಾಸೂರು, ಅಣಜಿ, ಹಿರೇಮೊರಬ, ಕೋಡಮಗ್ಗಿ, ಮೇದೂರು, ನಾಗವಂದ, ತಡಕನಹಳ್ಳಿ, ಹಳ್ಳೂರು, ಹಿರೇಕಬ್ಬಾರ ಹೋಬಳಿಗಳಿಗೆ ರಟ್ಟಿಹಳ್ಳಿಯ ತುಂಗಾ ಮೇಲ್ದಂಡೆ ಯೋಜನೆಯ ಎಇಇ ಮುಕುಂದರಾಜ (9449935139) ಅವರನ್ನು ನೇಮಿಸಲಾಗಿದೆ.

ಭಿಕ್ಷುಕರು, ನಿರ್ಗತಿಕರಿಗಾಗಿ ಕುಟೀರ ಆರಂಭ

ಸವಣೂರ: ಪಟ್ಟಣ ಸಂಪೂರ್ಣ ಸ್ತಬ್ಧವಾಗಿರುವ ಕಾರಣ ಅನ್ನಕ್ಕಾಗಿ ಪರದಾಡುತ್ತಿದ್ದ ಭಿಕ್ಷುಕರಿಗಾಗಿ ತಾಲೂಕು ಆಡಳಿತದಿಂದ ನಿರ್ಗತಿಕರ ಕುಟೀರ ಆರಂಭಿಸಲಾಗಿದೆ.

ಇಬ್ಬರು ಮಕ್ಕಳೊಂದಿಗೆ ಹರಿಹರದಿಂದ ಪಟ್ಟಣದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಹಿಳೆ ಹಾಗೂ ಬುದ್ಧಿಮಾಂದ್ಯ ವೃದ್ಧ ಮುನಿಸ್ವಾಮಿಗೆ ತಾಲೂಕಾಸ್ಪತ್ರೆಯಲ್ಲಿ ಭಾನುವಾರ ಚಿಕಿತ್ಸೆ ನೀಡಿ ನಿರ್ಗತಿಕರ ಕುಟೀರಕ್ಕೆ ಸೇರಿಸಲಾಯಿತು. ಮಹಿಳೆ ಹೇಮವ್ವ ಲಮಾಣಿ (37) ಅವರ ಮಕ್ಕಳಾದ ರವಿ (15), ಬುದ್ಧಿಮಾಂದ್ಯ ಸೋಮಪ್ಪ (12) ಪಟ್ಟಣದ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿಯಿಂದ ಹಸಿವಿನಿಂದ ಬಳಲುತ್ತಿದ್ದರು. ಸ್ಥಳಕ್ಕಾಗಮಿಸಿದ ಗ್ರಾಮಲೆಕ್ಕಾಧಿಕಾರಿ ರವಿ ಮಾಚಕನೂರ, ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳು ಉಪಾಹಾರ ವ್ಯವಸ್ಥೆ ಕಲ್ಪಿಸಿದರು. ಅಲ್ಲದೆ, ಈ ವಿಷಯವನ್ನು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಗಮನಕ್ಕೆ ತಂದಿದ್ದರು.

ಜಿಲ್ಲಾಡಳಿತದ ಆದೇಶದ ಮೇರೆಗೆ ಪಟ್ಟಣದ ಡಾ. ವಿ.ಕೃ. ಗೋಕಾಕ ವೃತ್ತದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ನಿರ್ಗತಿಕರ ಕುಟೀರ ಆರಂಭಿಸಲಾಗಿದೆ. ತಾಲೂಕಿನಲ್ಲಿ ಕಂಡುಬರುವ ಭಿಕ್ಷುಕರನ್ನು ಹಾಗೂ ನಿರ್ಗತಿಕರನ್ನು ಸೇರಿಸಲು ತಾಲೂಕಾಡಳಿತ ವ್ಯವಸ್ಥೆ ಅಥವಾ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಅವರನ್ನು ಸಂರ್ಪಸಲು ಕೋರಲಾಗಿದೆ.

ಗ್ರಾಮಲೆಕ್ಕಾಧಿಕಾರಿ ರವಿ ಮಾಚಕನೂರ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ, ಸಿಬ್ಬಂದಿ ಸತೀಶ ಪೂಜಾರ, ಹನುಮಂತಪ್ಪ ತೊಂಡೂರ, ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ಗಣೇಶಗೌಡ ಪಾಟೀಲ, ಆನಂದ ಮತ್ತಿಗಟ್ಟಿ, ಮಧುಕರ ಜಾಲಿಹಾಳ, ಇತರರಿದ್ದರು.