ಚಿತ್ರದುರ್ಗ: ನಗರದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮದಾರಚನ್ನಯ್ಯ ಸ್ವಾಮೀಜಿ ಅವರ ಜನ್ಮದಿನವನ್ನು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಭಕ್ತರು ಸರಳವಾಗಿ ಆಚರಿಸಿದರು.
ವಿಜಯನಗರ,ಕೊಪ್ಪಳ ಮತ್ತಿತರ ಜಿಲ್ಲೆಗಳ ಭಕ್ತರು ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ,ಶ್ರೀಗಳಿಗೆ ಜನ್ಮ ದಿನದ ಶುಭಾಶಯ ಕೋರಿ ದರು. ಹಿರಿಯೂರು ಅದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ,ಹಂಪಿ ಹೇಮಕೂಟದ ಶ್ರೀ ಪೂರ್ಣನಂದ ಭಾರತಿ ಸ್ವಾಮೀಜಿ, ಸಾಮರಸ್ಯ ವೇದಿಕೆಯ ವಾದಿರಾಜ್,
ಮಾದಾರ ಚನ್ನಯ್ಯ ಗುರುಪೀಠದ ಟ್ರಸ್ಟಿಗಳಾದ ರವಿಮಲ್ಲಾಪುರ,ಸಾಬು ದೊಡ್ಡಮನಿ,ನೆಲ ಮಂಗಲ ಎಚ್.ಹನುಮಂತರಾಜ್,ಯೋಗೀಶ್‌ಸೋರೆಕುಂಟೆ,ಮುಖಂಡರಾದ ಹಗರಿಬೊಮ್ಮನಹಳ್ಳಿ ರಾಮಪ್ಪ,ಇಳಕಲ್ರವಿ,ಬಾಳಪ್ಪ ಗೂಗಿಹಾಳ್,ವೀರೇಂದ್ರ ಕೊಗುಂಡೆ,ಪರಶುರಾಮ್,ಗುತ್ತಿಗೆದಾರರಾದ ಎಚ್,ಎಸ್.ರಾಘವೇಂದ್ರ,ರಮೇಶ್‌ಕೋಟಿ,ಎಮ್ಮೆಹಟ್ಟಿ ಹನುಮಂತಪ್ಪ ಮತ್ತಿತರರು ಇದ್ದರು.