ಜಿಲ್ಲೆ

ಅಂಚೆ ಕಚೇರಿಯಲ್ಲಿ ಪ್ರಬಂಧ ಸ್ಪರ್ಧೆ: ವಿದ್ಯಾರ್ಥಿಗಳು ಪ್ರಥಮ ಸ್ಥಾನ

ಹಾಸನ: ನಗರದ ಜಿಲ್ಲಾ ಪ್ರಧಾನ ಅಂಚೆ ಕಚೇರಿಯಲ್ಲಿ ಶುಕ್ರವಾರ ಹಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಗ್ಯಾನ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಲ್ಚರ್ ಆಫ್ ಇನ್ಟಿಗ್ರಿಟಿ ಫಾರ್ ನೇಷನ್ಸ್ ಪ್ರೂಸ್ಟರಿಟಿ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. 9ನೇ ತರಗತಿಯ ಪ್ರೇಕ್ಷಾ ಪ್ರಥಮ ಹಾಗು 7ನೇ ತರಗತಿಯ ಐಸಿರಿ ಎಸ್.ನಾರಾಯಣ್ ದ್ವಿತೀಯ ಬಹುಮಾನ ಪಡೆದಿದ್ದಾರೆ.

7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುನಿತ್ ಗೌಡ, 6ನೇ ತರಗತಿಯ ಸಮನ್ವಯ್ ಶ್ರೀಧರ್ ಮತ್ತು ಪ್ರಣಿತ್ ಪ್ರಶಂಸನಾ ಪತ್ರ ಪಡೆದಿದ್ದಾರೆ. ಶಾಲೆಯ ಪ್ರಾಂಶುಪಾಲ ಗೋಪಾಲ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಮುಖ್ಯ ಶಿಕ್ಷಕಿ ಎಚ್.ಎಸ್.ಸುಧಾ, ಸಹ ಶಿಕ್ಷಕರಾದ ಸವಿತಾ, ಫರಾನ ತಹಸಿನ್, ಫಿರ್ ದೋಸ್, ಸಿದ್ದರಂಗೇಗೌಡ, ಆಶಿತಾ, ಆಶಾ, ಸಫಾನ್, ಯಾಸೀನ್, ದೇವಿಕಾ, ಸುಮಾ ಇತರರಿದ್ದರು.