ಜಿಲ್ಲೆ

ಅಂಚೆ ಇಲಾಖೆಯಿಂದ ಆರ್ಥಿಕ ಸೇವೆ

ರಾಮದುರ್ಗ: ಅಂಚೆ ಇಲಾಖೆಯ ಸೇವೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗಿರದೆ ಜನತೆಗೆ ಆರ್ಥಿಕ ಸದಢತೆ ಒದಗಿಸಲೂ ಶ್ರಮಿಸುತ್ತಿದೆ. ಇಲಾಖೆಯ ಸೇವೆಗಳು ಜನತೆಯೊಂದಿಗೆ ಪ್ರಾಚಿನ ಕಾಲದಿಂದ ಇಂದಿನ ಆಧುನಿಕ ಕಾಲದ ವರೆಗೆ ಪ್ರಸ್ತುತವಿವೆ ಎಂದು ಉತ್ತರ ಕರ್ನಾಟಕ ವಲಯದ ಪೋಸ್ಟ್​ ಮಾಸ್ಟರ್​ ಜನರಲ್​ ಕ್ಯಾ. ಸುಶೀಲಕುಮಾರ ಹೇಳಿದರು.

ತಾಲೂಕಿನ ಮುಳ್ಳೂರ ಅನ್ನದಾನೇಶ್ವರ ಹಿರೇಮಠದ ಸಭಾಂಗಣದಲ್ಲಿ ಅಂಚೆ ಇಲಾಖೆಯಿಂದ ಈಚೆಗೆ ಹಮ್ಮಿಕೊಂಡಿದ್ದ ಅಂಚೆ ಜನ ಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಉಳಿತಾಯ ಮನೋಭಾವನೆ ಬೆಳೆಸಿಕೊಂಡು, ಅಂಚೆ ಸೇವೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಬೆಳಗಾವಿ ಅಂಚೆ ವಿಭಾಗದ ಅಧೀಕ ವಿಜಯ ವಾದೋನಿ ಅಧ್ಯತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜನರಿಗೆ ಅಂಚೆ ಇಲಾಖೆಯಿಂದ ದೊರೆಯುವ ಸೌಲಭ್ಯ ಒದಗಿಸಲಾಗುತ್ತಿದೆ. ಬೆಳಗಾವಿ ಅಂಚೆ ಕಚೇರಿಯಲ್ಲಿ ಪಾಸ್​ಪೋರ್ಟ್​ ಪಡೆಯಲು ಅವಕಾಶವಿದೆ. ಸೆ. 31ರಂದು ಪ್ರತಿ ತಾಲೂಕಿನಲ್ಲಿ ಬಹತ್​ ಆಧಾರ ಮೇಳ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಅನ್ನದಾನೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಂಚೆ ನಿರೀಕ ನಾಗರಾಜ ಮಳ್ಳಿ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಎಸ್​.ವಿ. ಕಲ್ಯಾಣಶೆಟ್ಟಿ, ಗ್ರಾಪಂ. ಅಧ್ಯೆ ಶೋಭಾ ನವಲಗುಂದ, ಪಿಡಿಒ ಮಾಲತೇಶ ದಾಸಪ್ಪನವರ, ಅಂಚೆ ಇಲಾಖೆಯ ಅಧಿಕಾರಿಗಳಾದ ರೂಪೇಶ, ಅರವಿಂದ, ಅಂಚೆ ಅಧಿಕಾರಿ ಬಿ.ಎಸ್​.ಮುಳ್ಳೂರ, ಗ್ರಾಪಂ ಸದಸ್ಯರಾದ ಶಿವರಡ್ಡಿ ಹೂಲಿಕಟ್ಟಿ, ಈರನಗೌಡ ಪಾಟೀಲ, ಮೌನೇಶ ಕಂಬಾರ, ಹನುಮಂತ ಧರಿಗೊಂಡ, ದಶಗಿರಸಾಬ, ನೀಲವ್ವ ಮಾದರ, ಬಸವರಾಜ ಸೋಮಗೊಂಡ, ಶ್ರೀಕಾಂತ ಪೂಜಾರ, ದಾವಲ್​ ಅಣ್ಣಿಗೇರಿ, ಲಕ್ಷ$್ಮಣ ಹಜೇರಿ, ಅರುಣ ಮನೆಪ್ಪಗೋಳ ಇದ್ದರು.