ಎಚ್.ಡಿ. ಕೋಟೆ: ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಪ್ರಾಣಾಪಾಯದಲ್ಲಿರುವವರ ಜೀವ ಉಳಿಸಬಹುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಮೈಸೂರಿನ ಕೆ.ಆರ್.ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಎಚ್.ಡಿ. ಕೋಟೆಯ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್, ಮೈಸೂರಿನ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಆರೋಗ್ಯವಂತ ವ್ಯಕ್ತಿ ಎಂಟು ವಾರಗಳಿಗೊಮ್ಮೆ ರಕ್ತದಾನ ಮಾಡಬಹುದು. ಇಂದಿನ ದಿನಗಳಲ್ಲಿ ರಕ್ತದಾನದ ಜತೆಗೆ ಅಂಗಾಂಗ ದಾನ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಅಂಗವೈಫಲ್ಯ ಅನುಭವಿಸುತ್ತಿರುವವರ ಆಶಾಕಿರಣಗಳಾಗಿ ದಾನಿಗಳು ಹೊರಹೊಮ್ಮುತ್ತಿದ್ದಾರೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಮಾತನಾಡಿ, ಕಾಲೇಜಿಗೆ ಎರಡು ಶೌಚಗೃಹಗಳನ್ನು ಲಯನ್ಸ್ ಸಂಸ್ಥೆ ವತಿಯಿಂದ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಏಡ್ಸ್ ಕುರಿತು ಅರಿವು ಮೂಡಿಸಲಾಯಿತು. ಕಾಲೇಜು ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಶನೀಲಾ ಪ್ರಥಮ, ಉಷಾ ದ್ವಿತೀಯ ಮತ್ತು ಎಚ್.ಎನ್.ಮಹೇಶ್ ತೃತೀಯ ಬಹುಮಾನ ಪಡೆದರು.
ರಕ್ತ ನಿಧಿ ಕೇಂದ್ರದ ಪಲ್ಲವಿ, ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಚಂದ್ರೇಗೌಡ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಎನ್. ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಸೋಮಣ್ಣ, ಸಿ.ಎನ್.ನಾಗಣ್ಣ, ರೋಟರಿ ಕ್ಲಬ್‌ನ ಅಧ್ಯಕ್ಷ ಎಸ್.ಎನ್. ನಿರಂಜನ್, ಕಾರ್ಯದರ್ಶಿ ಶಿವಣ್ಣ, ಆರ್ಮುಗಂ, ರಾಮು, ರಘು, ಉಪನ್ಯಾಸಕರಾದ ಎಂ.ಆರ್.ರಾಮಚಂದ್ರ, ಸಿದ್ದೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಕಲ್ಲೇಶ್ ಗೌಡ, ಕ್ರೀಡಾ ಕಾರ್ಯದರ್ಶಿ ಬಿ.ಸಿ.ಮಹೇಂದ್ರ, ಅವೀನಾ, ಡಿ.ಚಂದನ, ಸಿ.ಚಿತ್ರಾ, ಬಿ.ಚಿಕ್ಕದೇವಿ, ಸಂಗೀತಾಗೌಡ, ಶಾಂಭವಿ, ಚನ್ನಕೇಶವ, ಅಂಕಪ್ಪ, ಮಂಜು, ಮಹದೇವು, ಸಿದ್ದರಾಜು, ರವಿ, ಪ್ರಕಾಶ್, ದಿಲೀಪ್, ರವೀಶ್, ಮಹೇಶ್, ಪ್ರೀತಿ ಇದ್ದರು.