ಇಂಡಿ ಪಟ್ಟಣದ ಗುರುಭವನದ ಆವರಣದಲ್ಲಿ ಅಂಗವಿಕಲ ಮಕ್ಕಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಸಾಧನ- ಸಲಕರಣೆ ವಿತರಿಸಿದರು. ಟಿ.ಎಸ್.ಆಲಗೂರ, ಎಸ್.ಆರ್. ನಡಗಡ್ಡಿ, ಜಾವೀದ್ ಮೋಮಿನ್, ಯಮನಾಜಿ ಸಾಳುಂಕೆ ಇತರರಿದ್ದರು. 
ಜಿಲ್ಲೆ

ಅಂಗವಿಕಲರು ಸಲಕರಣೆಗಳ ಸದ್ಬಳಕೆ ಮಾಡಲಿ

Vijayapura - Desk - Chinnayya Chinnayyanamath

ಇಂಡಿ: ಅಂಗವಿಕಲ ಮಕ್ಕಳು ದೈವೀಪ್ರಿಯರಾಗಿರುತ್ತಾರೆ, ಪಾಲಕರು ಅಂಥ ಮಕ್ಕಳನ್ನು ಕಾಳಜಿಯಿಂದ ಕಾಣಬೇಕು. ಸರ್ಕಾರ ನೀಡಿದ ಸಾಧನೆ ಸಲಕರಣೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಗುರುವಾರ ಆಯೋಜಿಸಿದ 2023-24 ನೇ ಸಾಲಿನಲ್ಲಿ ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳಿಗೆ ಮತ್ತಷ್ಟು ಉತ್ತೇಜನ ನೀಡಿ ಈ ಮಕ್ಕಳು ಮುಖ್ಯವಾಹಿನಿ ಬರುವಂತೆ ಮಾಡಬೇಕು. ಸರ್ಕಾರದ ವ್ಯವಸ್ಥೆ ಮತ್ತು ಇಲಾಖೆಯ ಅಧಿಕಾರಿಗಳ ಸಹಯೋಗದಿಂದ ಸಲಕರಣೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಿಇಒ ಟಿ.ಎಸ್.ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ನಡಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ್ ಮೋಮಿನ್, ಯಮನಾಜಿ ಸಾಳುಂಕೆ, ವಿಠ್ಠಲಗೌಡ ಬಿರಾದಾರ, ಐ.ಜಿ.ಆಳೂರ, ಬಿ.ಐ. ಗೊರನಾಳ ನಿರೂಪಿಸಿ, ವಂದಿಸಿದರು.