ಜಿಲ್ಲೆ

ಅಂಗವಿಕಲರ ಸಮನ್ವಯ ಗ್ರಾಮಸಭೆ

ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ಅಂಗವಿಕಲರ ಸಮನ್ವಯ ಗ್ರಾಮ ಸಭೆ ನಡೆಯಿತು.

ಗ್ರಾ.ಪಂ. ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುರ್ನವಸತಿ ಕಾರ್ಯಕರ್ತ ವಿಆರ್‌ಡಬ್ಲುೃ ಶಶಿಕುಮಾರ್ ಮಾತನಾಡಿ, ಅಂಗವಿಕಲರಿಗೆ ಸರ್ಕಾರ ಮತ್ತು ಇಲಾಖೆಯಿಂದ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದು, ಅಂಗವಿಕಲರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

18ರಿಂದ 60 ವರ್ಷದೊಳಗಿನ ಅಂಗವಿಕಲರಿಗೆ ಸರ್ಕಾರ ಮತ್ತು ಇಲಾಖೆ ಸ್ವಂತ ಉದ್ಯೋಗಕ್ಕಾಗಿ ಶೇ.50 ಸಬ್ಸಿಡಿಯಲ್ಲಿ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುತ್ತಿದೆ ಎಂದರು.

ಸಭೆಯಲ್ಲಿ ಅಂಗವಿಕಲರ ಕುಂದುಕೊರತೆ ಸೇರಿದಂತೆ ಇತರ ಸಮಸ್ಯೆಗಳನ್ನು ಆಲಿಸಲಾಯಿತು. ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಎಸ್.ಆರ್.ಮಧು, ಸದಸ್ಯರಾದ ಎಸ್.ಎನ್.ರಘು, ಸರ್ದಾರ್ ಆಹಮ್ಮದ್, ಎಸ್.ಸಿ.ಶರತ್‌ಶೇಖರ್, ಎನ್.ಎ.ಆದಿತ್ಯಗೌಡ, ಸರೋಜಾಶೇಖರ್, ಪಿಡಿಒ ಮೇದಪ್ಪ, ಕಾರ್ಯದರ್ಶಿ ದೇವರಾಜ್, ಲೆಕ್ಕಾಧಿಕಾರಿ ಲೀಲಾ, ಗ್ರಾ.ಪಂ. ಸಿಬ್ಬಂದಿ ಪೌಜಿಯ ಇತರರಿದ್ದರು.