ಜಿಲ್ಲೆ

ಅಂಗವಿಕಲರ ಸಮಗ್ರ ಸಮೀಕ್ಷೆ ವರದಿ ಸಲ್ಲಿಸಿ; ಶಂಕರ ರಾಠೋಡ್​

ಚಿಂಚೋಳಿ: ತಾಲೂಕಿನ ಪ್ರತಿ ಬೂತ್​ ಮಟ್ಟದಲ್ಲಿ ಸಂಚರಿಸಿ ಅಂಗವಿಕಲರ ಸಮಿಕ್ಷೆಗೆ ಮುಂದಾಗಬೇಕು. ಸುಮಾರು 21 ರೀತಿಯ ಅಂಗವಿಕಲರ ಮಾಹಿತಿ ಶೀಘ್ರದಲ್ಲಿ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಠೋಡ್​ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ವಿಕಲಚೇತನರ ಪ್ರೇರಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ 4331 ವಿಕಲಚೇತನರಿದ್ದು, ಇದೀಗ ನೂತನವಾಗಿ 96 ವಿಕಲಚೇತನರ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಪ್ರೇರಕರು ಪ್ರತಿ ಭೂತ ಮಟ್ಟದಲ್ಲಿ ಸಂಚರಿಸಿ 1 ರಿಂದ 17 ಹಾಗೂ 17 ರಿಂದ 100 ವರ್ಷಕ್ಕೂ ಮೇಲ್ಪಟ್ಟವರ ಸಮಗ್ರ ವರದಿ ಸಿದ್ಧಪಡಿಸಿ ಶೀಘ್ರದಲ್ಲಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ಈ ವೇಳೆ ತಾಲೂಕು ವಿಕಲಚೇತನ ಸಂಯೋಜಕ ಶ್ರೀಮಂತ, ಪ್ರಭುದೇವ, ಕಲ್ಲಪ್ಪ, ವಿಠಲ, ಮಹಾದೇವ, ಲೋಕೇಶ್, ಬಸವರಾಜ, ಅರುಣಕುಮಾರ, ರಾಣಿಬಾಯಿ, ಶರಣಮ್ಮ ಸೇರಿದಂತೆ ಅನೇಕರು ಇದ್ದರು.