ಹುಕ್ಕೇರಿ: ಪಟ್ಟಣದ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು ಪೂರೈಸುವಂತೆ ಶಾಸಕ ನಿಖಿಲ್ ಕತ್ತಿ ಅಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಸಾರ್ವಜನಿಕ ಕುಂದು ಕೊರತೆ ಆಲಿಸಿ ಅವರು ಮಾತನಾಡಿದರು. ಸಭೆಯಲ್ಲಿ ಭಾಗಿಯಾದ ಕ್ಷೇತ್ರದ ಜನರು ಅಭಿವೃದ್ಧಿಗೆ ಶಾಸಕರ ನಿ ಬಿಡುಗಡೆ, ಎಲಿಮುನ್ನೋಳಿ-ಹಣಜ್ಯಾನಟ್ಟಿ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಹಾಗೂ ಹುಕ್ಕೇರಿ ಪಟ್ಟಣದ ಟೀಚರ್ಸ್ ಕಾಲನಿ (ಬಾಗೇವಾಡಿ ರೋಡ್) ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕೆಲಸ ಕೈಗೊಳ್ಳುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಶಾಸಕರ ನಿ ಬಿಡುಗಡೆ ಮಾಡಿಲ್ಲ. ಎಲ್ಲ ಹಣವನ್ನು ಅಕ್ಕಿಗೆ ನೀಡುತ್ತಿದೆ. ಅನುದಾನ ಬಿಡುಗಡೆಯಾದ ಬಳಿಕ ಅಭಿವೃದ್ಧಿ ಕೈಗೊಳ್ಳುವುದಾಗಿ ಶಾಸಕರು ಹೇಳಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಪುರಸಭೆ ಸದಸ್ಯ ರಾಜು ಮುನ್ನೋಳಿ,
ಹಿರಾ ಶುಗರ್ಸ್ ನಿರ್ದೇಶಕರಾದ ಬಸು ಮರಡಿ, ಸುರೇಶ ದೊಡಲಿಂಗನವರ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಬಸಗೌಡ ಮಗೆನ್ನವರ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಮುಖಂಡರಾದ ಶಿವನಗೌಡ ಪಾಟೀಲ, ಅಶೋಕ ಹಿರೇಕೋಡಿ, ಮುನ್ನಾ ಕಳಾವಂತ, ಮಹಾನಿಂಗ ಸನದಿ, ಚನ್ನಪ್ಪ ಗಜಬರ, ಶಿವರಾಜ ನಾಯಿಕ ಇತರರಿದ್ದರು.