ಬಾಕಿಯಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ನೀಡುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂ(ಸಿಐಟಿಯು)ದ ವತಿಯಿಂದ ಪ್ರತಿಭಟಿಸಲಾಯಿತು. ದೊಡ್ಡವ್ವ ಪೂಜಾರಿ, ಜೆ.ಎಂ.ಜೈನೇಖಾನ್​, ಗೋಧಾವರಿ ರಾಜಾಪುರೆ, ಮಂದಾ ನೇವಗಿ, ಸಂಧ್ಯಾ ಕುಲಕರ್ಣಿ, ಮೀನಾ ದಪಡೆ, ಸರಸ್ವತಿ ಮಾಳಶೆಟ್ಟಿ, ರೇಣುಕಾ ರೇಣುಕೆಗೌಡರ, ವಿಜಯಾ ಕಲಾದಗಿ ಇದ್ದರು. 
ಜಿಲ್ಲೆ

ಅಂಗನವಾಡಿ ಬಾಡಿಗೆ ಹಣ ಬಿಡುಗಡೆ ಮಾಡಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಹದಿನೈದು ತಿಂಗಳಿನಿಂದ ಬಾಕಿ ಇರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂ(ಸಿಐಟಿಯು)ದ ವತಿಯಿಂದ ಪ್ರತಿಭಟಿಸಲಾಯಿತು.

ಸುಮಾರು 30 ರಿಂದ 40 ವರ್ಷಗಳಿಂದ ಗೌರವಧನದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ನೌಕರರ ಜೀವನ ಕಷ್ಟಕರವಾಗಿದೆ. ಅಂಗನವಾಡಿ ಸರ್ಕಾರದ ಹಲವಾರು ಯೋಜನೆಗಳಲ್ಲಿ ಅಂಗನವಾಡಿ ನೌಕರರನ್ನು ದುಡಿಸಿಕೊಳ್ಳುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಕೆಲಸದಿಂದ ತೆಗೆದು ಹಾಕುತ್ತೇವೆಂದು ಅಧಿಕಾರಿಗಳು ಹೆದರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಿಐಟಿಯು ಜಿಲ್ಲಾಧ್ಯೆ ದೊಡ್ಡವ್ವ ಪೂಜಾರಿ ಮಾತನಾಡಿ, ಕಟ್ಟಡಗಳು ಇಲ್ಲದೆ ಗುಡಿ&ಗುಂಡಾರಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದವು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಾಗ ಬಾಡಿಗೆ ಕಟ್ಟಡ ಪಡೆದು ಅಂಗನವಾಡಿ ಕೇಂದ್ರ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, 15 ತಿಂಗಳಿಂದ ಇಲಾಖೆಯಿಂದ ಬಾಡಿಗೆ ಹಣ ಬಂದಿಲ್ಲ. ಇದರಿಂದ ಕಟ್ಟಡ ಮಾಲೀಕರು ಜಾಗ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಅದನ್ನು ಅಧಿಕಾರಿಗಳ ಗಮನಕ್ಕೆ ತಂದರೆ "ದುಡ್ಡು ಬಂದ ಮೇಲೆ ಕೊಡುವುದಾಗಿ ಮಾಲೀಕರಿಗೆ ಹೇಳಮ್ಮ' ಎಂದು ದಬಾಯಿಸುತ್ತಾರೆ. ಇದರಿಂದ ನಮಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ತಣವೇ ಬಾಡಿಗೆ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಜೈನೇಖಾನ್​ ಮಾತನಾಡಿ, ಇತ್ತೀಚೆಗೆ ಬೆಳಗಾವಿಯ ದರ್ಬಾರ್​ ಗಲ್ಲಿಯ ಅಂಗನವಾಡಿ ಕಾರ್ಯಕರ್ತೆ ಶಬಾನಾ ಎಂಬುವವರು ತಮ್ಮ ಕೊರಳಲ್ಲಿನ ಚಿನ್ನದ ಮಾಂಗಲ್ಯದ ಸರ ಒತ್ತೆ ಇಟ್ಟು ಬಾಡಿಗೆ ಹಣ ಕೊಟ್ಟಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಜಿಲ್ಲೆಯಲ್ಲೇ ಈ ರೀತಿ ಟನೆ ನಡೆದಿರುವುದು ನಿಜಕ್ಕೂ ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಪದಾಧಿಕಾರಿಗಳಾದ ಗೋಧಾವರಿ ರಾಜಾಪುರೆ, ಮಂದಾ ನೇವಗಿ, ಸಂಧ್ಯಾ ಕುಲಕರ್ಣಿ, ಮೀನಾ ದಪಡೆ, ಸರಸ್ವತಿ ಮಾಳಶೆಟ್ಟಿ, ರೇಣುಕಾ ರೇಣುಕೆಗೌಡರ, ವಿಜಯಾ ಕಲಾದಗಿ ಸೇರಿದಂತೆ ಇತರಿದ್ದರು.