ನವನಗರದ ವಿವಿಧ ಸೆಕ್ಟರಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಮಂಗಳವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪುರ ಇತರರು ಇದ್ದರು. 
ಜಿಲ್ಲೆ

ಅಂಗನವಾಡಿ ಕೇಂದ್ರಗಳಿಗೆ ನ್ಯಾ.ವಿಜಯ ಭೇಟಿ

ಬಾಗಲಕೋಟೆ: ನವನಗರದ ವಿವಿಧ ಸೆಕ್ಟರಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ನವನಗರದ ಸೆಕ್ಟರ ನಂ.೮ರಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ ೫೮ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಗ್ಗೆ ೧೦.೩೦ ಗಂಟೆಯಾದರೂ ಅಂಗನವಾಡಿ ಕಾರ್ಯಕರ್ತೆ ಇರಲಿಲ್ಲ. ಸಹಾಯಕಿ ಮೂಲಕ ಸಂಪರ್ಕಿಸಿ ಕೇಂದ್ರಕ್ಕೆ ಬರಲು ತಿಳಿಸಿದಾಗ ಕೇಂದ್ರದಲ್ಲಿ ಸ್ವಚ್ಛತೆ, ಸಮಯಕ್ಕೆ ಸರಿಯಾಗಿ ಬರದೇ ಇರುವುದು, ಮಕ್ಕಳಿಗೆ ಗುಣಮಟ್ಟದ ಊಟ ಸಹ ನೀಡದೇ ಇರುವದನ್ನು ಮಾಹಿತಿ ಪಡೆದು ಅಸಮಾಧಾನ ವ್ಯಕ್ತಪಡಿಸಿದರು.

ಅಡುಗೆ ಕೋಣೆ, ಆಹಾರ ಪದಾರ್ಥಗಳು ಪರಿಶೀಲನೆ ಮಾಡಿದಾಗ ಗುಣಮಟ್ಟವಾಗಿರಿಲ್ಲ. ಈ ಬಗ್ಗೆ ಕೇಳಿದಾಗ ಜಾನ ಕುರುಡುತನ ಪ್ರದರ್ಶನ ಮಾಡಿದರು. ಮಕ್ಕಳ ಹಾಜರಾತಿ ಪ್ರತಿದಿನ ಹಾಕದಿರುವುದು ಕಂಡುಬಂದಿತು. ಹಾಜರಾತಿಯಲ್ಲಿ ೧೬ ಮಕ್ಕಳಿದ್ದರೆ, ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆ ೫ ರಿಂದ ೬ ಜನ ಮಾತ್ರ ಇರುವುದು ಕಂಡುಬಂದಿತು. ಸರಿಯಾದ ದಾಖಲಾತಿ ಸಹ ಇರುವದಿಲ್ಲ. ಗರ್ಭಿಣಿ , ಭಾಣಂತಿಯರ ಮಾಹಿತಿ ಇರುವದಿಲ್ಲ. ಮೇನುವಿನ ಪ್ರಕಾರ ಮಕ್ಕಳಿಗೆ ಆಹಾರ ನೀಡದೇ ಇರುವುದು ತಿಳಿದು ಬಂದಿತು.

ದವಸ, ದಾನ್ಯ ಒಂದೇರಡು ದಿನಗಳ ವರೆಗೆ ಆಗುವಷ್ಟು ಮಾತ್ರ ಇದ್ದು, ಅದು ಕೂಡಾ ಬಹಳ ದಿನದ ತೊಗರಿ ಹಾಗೂ ಅಕ್ಕಿಗಳನ್ನು ಪರಿಶೀಲಿಸಿದರು. ಕಾನೂನು ಸೇವಾ ಪ್ರಾಧಿಕಾರದ ಹಿಂದಿನ ಸದಸ್ಯ ಕಾರ್ಯದರ್ಶಿಗಳು ಅಂಗನವಾಡಿ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದ್ದರೂ ಸಹ ಬದಲಾವಣೆ ಆಗಿಲ್ಲವೆಂದು ನ್ಯಾ.ಹೇಮಾ ಪಸ್ತಾಪುರ ತಿಳಿಸಿದರು.

ಪರಶೀಲನೆ ವೇಳೆಯಲ್ಲಿ ಹಾಜರಾತಿ ಬಿಟ್ಟು ಉಳಿದ ಆಹಾರ ವಿತರಣೆ ಮತ್ತು ಖರ್ಚಿನ ಪುಸ್ತಕ, ಮನೆ ಭೇಟಿ ಪುಸ್ತಕ, ಮಕ್ಕಳ ತೂಕದ ವಿವರ ದಾಖಲಾತಿ, ಮನೆ ಆಹಾರ ವಿತರಣೆ ಪುಸ್ತಕ, ಸಲಹಾ, ಸಂದರ್ಶನಕರ ಪುಸ್ತಕ, ಭಾಗ್ಯಲಕ್ಷ್ಮೀ
ಅರ್ಜಿಗಳ ಪುಸ್ತಕ, ಮಾತೃವಂದನಾ ಅರ್ಜಿಗಳ ಪುಸ್ತಕ, ಬಾಲವಿಕಾಸ ಸಮಿತಿ ಪುಸ್ತಕ, ತಾಯಂದಿರ ಸಭೆ, ಪೌಷ್ಠಿಕ ಆಹಾರ ಸಭೆ ಪುಸ್ತಕ ಹಾಗೂ ಸಾದಿಲ್ವಾರು ಪುಸ್ತಕ ವಹಿ ಸಹ ಇಲ್ಲದಿರುವುದು ಕಂಡುಬಂದಿತು.

ಇದಕ್ಕೂ ಪೂರ್ವದಲ್ಲಿ ಸೆಕ್ಟರ ನಂ.೩೫ ರಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಯವಾದರೂ ಬೀಗ ತೆರೆಯದೇ ಇರುವುದು ಕಂಡು ಬಂದಿತು. ಇನ್ನೊಂದು ಕೇಂದ್ರಕ್ಕೆ ಭೇಟಿ ನೀಡಿದಾಗ ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆ ಇರದೇ ಮಕ್ಕಳು ಸಹ ಬರದೇ ಇರುವುದು ಕಂಡುಬಂದಿತು. ಈ ಬಗ್ಗೆ ಮೇಲಾಽಕಾರಿಗಳಿಗೆ ವರದಿ ಮಾಡುವಂತೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪುರ ಇದ್ದರು.