ಜಿಲ್ಲೆ

ಅಂಗನವಾಡಿ ಕಟ್ಟಡ ಉದ್ಘಾಟನೆ

ಚಾಮರಾಜನಗರ: ತಾಲೂಕಿನ ತೆಂಕಲಮೋಳೆ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಅಂಗನವಾಡಿ ಕಟ್ಟಡವನ್ನು ಕುದೇರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ನಾಗರಾಜ್ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಶೀಲಾ ನಾಗರಾಜ್ ಮಾತನಾಡಿ, ಸರ್ಕಾರ ಅಂಗನವಾಡಿಗಳಿಗೆ ಲಕ್ಷಾಂತರ ರೂ, ಖರ್ಚು ಮಾಡುತ್ತಿದೆ. ಜನರು ಸರ್ಕಾರದ ಈ ಯೋಜನೆಯನ್ನು ಸದುಪಯೋಗಿಸಿಕೊಳ್ಳಬೇಕು. ಗ್ರಾಮದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ತಾಲೂಕು ಪಂಚಾಯಿತಿ ಸದಸ್ಯ ಮಹದೇವಯ್ಯ, ಗ್ರಾ.ಪಂ ಮಾಜಿ ಅಧ್ಯಕ್ಷೆ ಶಕುಂತಲಾ ರವೀಂದ್ರ, ಸವಿತಾ ಕುಮಾರ್, ಮಾಜಿ ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಜಯಶಂಕರ್, ಸುಂದರಶೆಟ್ಟಿ, ಮುಖಂಡರಾದ ರವಿ, ಪುಟ್ಟಸ್ವಾಮಿ ಶೆಟ್ಟಿ, ವೆಂಕಟೇಶ್, ಯಲಕ್ಕೂರು ಮಧು, ಮುಖ್ಯ ಶಿಕ್ಷಕಿ ರಾಜಮ್ಮ, ಸಹ ಶಿಕ್ಷಕಿ ಶಾಂತಮ್ಮ, ತೆಂಕಲಮೋಳೆ ಗ್ರಾಮದ ಯಜಮಾನರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.