ಜಿಲ್ಲೆ

ಅಂಕದ ಜತೆಗೆ ಬಾಂಧವ್ಯಕ್ಕೂ ಮಹತ್ವ ಕೊಡಿ- ಹರಿಹರ ಎಸ್ ಜೆವಿಪಿ ಕಾಲೇಜಿನಲ್ಲಿ ಶೈಕ್ಷಣಿಕ ಸಮಾರೋಪ

ದಾವಣಗೆರೆ: ವಿದ್ಯಾರ್ಥಿಗಳು ಉತ್ತಮ ಅಂಕ ಮತ್ತು ಉದ್ಯೊಗ ಗಳಿಕೆಯಷ್ಟೇ ಜೀವನ ಎಂದು ಭಾವಿಸಬಾರದು.ಸಂಬಂಧ, ಬಾಂಧವ್ಯಗಳಿಗೆ ಮಹತ್ವ ನೀಡಬೇಕು ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ಹೇಳಿದರು.

ಹರಿಹರದ ಎಸ್.ಜೆ.ವಿ.ಪಿ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಆತ್ಮೀಯರಂತೆ ಇರಬೇಕಾದ ಅನಿವಾರ್ಯತೆ ಇದೆ. ನಾಡು ನುಡಿ ಕಟ್ಟುವಲ್ಲಿ ಪ್ರತಿಯೊಬ್ಬರು ನಿರಂತರ ಶ್ರಮ ಪಡಬೇಕು. ತಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ್ ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಶೈಕ್ಷಣಿಕ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು

ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ ನಿರ್ದೇಶಕರಾದ ಎನ್.ಎಂ.ತಿಪ್ಪೇಸ್ವಾಮಿ. ಎನ್.ಎಚ್ ಪಾಟೀಲ್,

ಐ.ಕ್ಯೂ.ಎ.ಸಿ ಸಂಯೋಜಕ ಡಾ.ವೀರಣ್ಣ, ಪ್ರಾಚಾರ್ಯೆ ಶಿವಗಂಗಮ್ಮ ,ಉಪನ್ಯಾಸಕರಾದ ಡಾ.ರಮೇಶ್ ಪರ್ವತಿ, ಡಾ.ದಿವಾಕರ್, ಡಿ.ಟಿ ಮಂಜುನಾಥ್, ನಳಿನಿ, ರಶ್ಮಿ ಇದ್ದರು.

....

.