ಕೋಟೆನಗರಿ ಸಂಪೂರ್ಣ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ 
ಜಿಲ್ಲೆ

ಅ.೯ ರಂದು ಕೋಟೆನಗರಿಯಲ್ಲಿ ಪಥ ಸಂಚಲನ

ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಭಾನುವಾರ ಅದ್ದೂರಿಯಾಗಿ ಪಥ ಸಂಚಲನ ನಡೆಯಲಿದ್ದು, ಆರ್‌ಎಸ್‌ಎಸ್ ಕೇಂದ್ರ ಸ್ಥಳ ನಾಗಪೂರ ನಂತರದಲ್ಲಿ ಹೆಚ್ಚು ಗಮನ ಸೆಳೆದಿರುವ ಹಾಗೂ ಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ನಗರದ ಪಥ ಸಂಚಲನಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಥ ಸಂಚಲನ ಮಾರ್ಗದೂದ್ದಕ್ಕೂ ಶುಭ, ಸ್ವಾಗತ ಕೋರುವ ಕೌಟೌಗಳು ಅಳವಡಿಸಲಾಗಿದ್ದು ರಾರಾಜಿಸುತ್ತಿವೆ. ಕೋಟೆನಗರಿ ಸಂಪೂರ್ಣ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ. ಗಣವೇಷಧಾರಿಗಳನ್ನು ಸ್ವಾಗತಿಸಲು ಮಾರ್ಗ ಮಧ್ಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಪಥ ಸಂಚಲನಕ್ಕೆ ನಗರದ ಸಂಪೂರ್ಣ ಸಜ್ಜಾಗಿದ್ದು, ಹಬ್ಬದ ವಾತಾವರಣ ಸೃಷ್ಠಿಯಾಗಿದೆ.
ಪಥ ಸಂಚಲನ ಸಾಗುವ ಮಾರ್ಗದಲ್ಲಿ ಭಗಸಿಂಗ್, ವನಕೆ ಓಬವ್ವಾ, ಕಿತ್ತೂರಿ ರಾಣಿ ಚನ್ನಮ್ಮ, ಸಂಗೂಳಿ ರಾಯಣ್ಣ ಸೇರಿದಂತೆ ನಾಡಿನ ವಿವಿಧ ಮಹನೀಯರ ವೇಷಧರಿಸಿ ಮಕ್ಕಳು ಕಂಗೂಳಿಸಲಿದ್ದಾರೆ. ಪುಷ್ಪ ವೃಷ್ಠಿ, ಘೋಷಣೆಗಳು ಪಥ ಸಂಚಲನದ ಗಮನ ಸೆಳೆಯಲಿದ್ದು, ಆರ್‌ಎಸ್‌ಎಸ್ ಹೊಸ ಮಾದರಿಯ ವಸ್ತ್ರ ಸಂಹಿತೆ ಅನುಸಾರ ಪ್ಯಾಂಟ್‌ಧರಿಸಿ ಪಥ ಸಂಚಲನ ನಡೆಯಲಿದೆ. ೧೬ ವರ್ಷಕ್ಕಿಂತ ಮೇಲ್ಪಟ್ಟವರು ಈ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಅಂದಾಜು ೩ ಸಾವಿರ ಜನ ಗಣವೇಷಧಾರಿಗಳು ಭಾಗವಹಿಸಲಿದ್ದಾರೆ. ಬಸವೇಶ್ವರ ಮೈದಾನದಿಂದ ಸರಿಯಾಗಿ ಸಂಜೆ ೪ ಗಂಟೆಗೆ ಎರಡು ಪಥಗಳಲ್ಲಿ ಆರಂಭಗೊಳ್ಳುವ ಪಥಸಂಚಲನ ನಗರದ ಪ್ರಮುಖ ರಸ್ತೆಗಳನ್ನು ಸಂಚರಿಸಿ ೪.೫೫ಕ್ಕೆ ಮರಳಿ ಮೈದಾನ ತಲುಪಲಿದೆ. ಈ ನಡುವೆ ೪.೪೬ಕ್ಕೆ ಬಸವೇಶ್ವರ ವೃತ್ತದಲ್ಲಿ ಎರಡು ಪಥಗಳು ಸಮಾಗಮವಾಗಲಿದ್ದು, ಜಯ ಘೋಷಗಳು ಮುಗಿಲು ಮುಟ್ಟಲಿವೆ.
ಪಥ ಸಂಚಲನ ಪೂರ್ಣಗೊಂಡ ನಂತರ ೫:೨೦ ಕ್ಕೆ ಬಸವೇಶ್ವರ ಕಾಲೇಜು ಮೈದಾನದಲ್ಲಿ ಆರ್‌ಎಸ್‌ಎಸ್‌ನ ನಗರ ವಾರ್ಷಿಕೋತ್ಸವದ ಬಹಿರಂಗ ಕಾರ್ಯಕ್ರಮ ಜರುಗಲಿದ್ದು. ತೋವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಶ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಮುಖ್ಯ ಭಾಷಣ ಮಾಡಲಿದ್ದಾರೆ.