ಲಯನ್ಸ್ ಸಂಸ್ಥೆ ಸಂಯೋಜಕ ಜಿ.ರಮೇಶ್  
ಜಿಲ್ಲೆ

ಅ. ೨೬ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಿಕ್ಕಮಗಳೂರು: ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಹಾಗೂ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ವರ್ಲ್ಡ್ ಸ್ಟೊçÃಕ್ ಡೇ ಪ್ರಯುಕ್ತ ಪ್ರಥಮ ಬಾರಿಗೆ ಉಚಿತ ಸ್ಟೊçÃಕ್ ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಅ. ೨೬ರಂದು ಭಾನುವಾರ ಬೆಳಗ್ಗೆ ೧೦.೩೦ರಿಂದ ಮಧ್ಯಾಹ್ನ ೨.೩೦ರವರೆಗೆ ಮಧುವನ ಲೇಔಟ್‌ನಲ್ಲಿರುವ ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಸಂಸ್ಥೆ ಸಂಯೋಜಕ ಜಿ.ರಮೇಶ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ನ್ಯೂರೋಲಜಿಸ್ಟ್ ಅವರಿಂದ ನೇರ ಆರೋಗ್ಯ ತಪಾಸಣೆ ಮತ್ತು ಸಲಹೆ, ಸ್ಟೊçÃಕ್ ಲಕ್ಷಣಗಳು, ಕಾರಣಗಳು ಹಾಗೂ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.

ಹೃದಯ ಮತ್ತು ಮೆದುಳಿನ ರಕ್ತನಾಳದ ತಪಾಸಣೆ ಕುರಿತು ಮಾಹಿತಿ, ಸ್ಟೊçÃಕ್ ನಂತರ ಪುನಶ್ಚೇತನ ಕುರಿತು ಮಾರ್ಗದರ್ಶನ, ರಕ್ತದೊತ್ತಡ, ಸಕ್ಕರೆ, ಕೊಲೆಸ್ಟಾçಲ್, ತೂಕ, ಬಿಎಂಐ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮಾತು ಮತ್ತು ನುಂಗುವ ತೊಂದರೆಗಳ ತಪಾಸಣೆ ಮತ್ತು ಸಲಹೆ, ಫಿಜಿಯೋ ಥೆರಫಿ ಕುರಿತು ಮಾಹಿತಿ ಮತ್ತು ಸಲಹೆ, ಆಪ್ತ ಸಮಾಲೋಚನೆ, ಅರಿವಿನ ಪುನರ್ವಸತಿ ಕುರಿತು ಸಲಹೆ, ಆರೋಗ್ಯಕರ ಜೀವನಶೈಲಿ ಹಾಗೂ ಆಹಾರ ಕುರಿತು ಉಪನ್ಯಾಸ ನೀಡಲಾಗುವುದು ಎಂದು ಹೇಳಿದರು.

ಈ ಶಿಬಿರದಲ್ಲಿ ತಜ್ಞ ವೈದ್ಯರಾದ ನರರೋಗ ತಜ್ಞ ಡಾ.ತೇಜೇಶ್, ಶ್ರೇಯ, ವಿನೋದ್, ಜೀವಿತ, ಭರತ್, ಚಂದನ ಹಾಗೂ ಡಾ. ಜೆ.ಪಿ ಕೃಷ್ಣೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಡಾ. ತೇಜೇಶ್ ಮಾತನಾಡಿ, ಸ್ಟೊçÃಕ್‌ಗೆ ಒಳಗಾದ ರೋಗಿಯನ್ನು ನಾಲ್ಕುವರೆ ಗಂಟೆಯ ಒಳಗೆ ಜಿಲ್ಲಾಸ್ಪತ್ರೆಗೆ ಕರೆತಂದರೆ ೪೨ ಸಾವಿರ ರೂ. ವೆಚ್ಚದ ಚುಚ್ಚುಮದ್ದನ್ನು ಉಚಿತವಾಗಿ ನೀಡುವ ಮೂಲಕ ಸ್ಟೊçÃಕ್ ತಡೆಗಟ್ಟಬಹುದಾಗಿದೆ. ಈಗಾಗಲೇ ನರರೋಗ ಸೇರಿದಂತೆ ಸ್ಟೊçÃಕ್ ಆದ ೮೦೦ ಜನರಿಗೆ ಉಚಿತ ಚಿಕಿತ್ಸೆ ನೀಡಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಶ್ರೇಯಾ, ಡಾ.ಚಂದನ, ವಿನೋದ್, ಲಯನ್ಸ್ ಅಧ್ಯಕ್ಷ ಸಿ.ಎನ್.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.