ಜಿಲ್ಲೆ

ಅ.5ರಿಂದ ಯೋಗ ಆರೋಗ್ಯ, ಆಧ್ಯಾತ್ಮ ಪ್ರವಚನ

ಚಿತ್ರದುರ್ಗ: ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ, ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 150ನೇ ಜಯಂತ್ಯುತ್ಸವವನ್ನು ಅಕ್ಟೋಬರ್ 5ರಿಂದ 13ರ ವರೆಗೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಯೋಗ ಗುರು ಚನ್ನಬಸವಣ್ಣ ಮಾರ್ಗದರ್ಶನದಲ್ಲಿ ಸೆ.25ರಿಂದ ಅಕ್ಟೋಬರ್ 4ರ ವರೆಗೆ ಅನುಭವ ಮಂಟಪದಲ್ಲಿ ನಿತ್ಯ ಮುಂಜಾನೆ 5.30ರಿಂದ 7ರ ವರೆಗೆ ಯೋಗ ಆರೋಗ್ಯ-ಆಧ್ಯಾತ್ಮ ಶಿಬಿರ ಹಾಗೂ ಸಂಜೆ 6.30ರಿಂದ 7.30 ಪ್ರವಚನ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಈ ಎರಡೂ ಕಾರ‌್ಯಕ್ರಮಗಳಿಗೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬರುವವಂಥವರಿಗೆ ವಾಹನ ಸೌಕರ್ಯ ಕಲ್ಪಿಸಲಾಗುವುದೆಂದು ಮಠದ ಪ್ರಕಟಣೆ ತಿಳಿಸಿದೆ.