ಜಿಲ್ಲೆ

ಅ. 5ರಂದು ಅಲ್ಲಂಭವನ ದಸರಾ ದಾಂಡಿಯಾ

ಬಳ್ಳಾರಿ : ಇಲ್ಲಿನ ಅಲ್ಲಂ ಭವನದಲ್ಲಿ ವಿಜಯವಾಣಿ ದಿನಪತ್ರಿಕೆ, ಓಂ ತ್ರಿಯಾ ಸಮೂಹ ಹಾಗೂ ಸೈರಾತ್ ದೇಸಾಯಿ ಪೋಟೋಗ್ರಾಫಿ ಸಹಯೋಗದೊಂದಿಗೆ ದಸರಾ ಹಬ್ಬದ ಅಂಗವಾಗಿ ಅ. 5 (ಶನಿವಾರ)ದಂದು ಅಲ್ಲಂಭವನ ದಸರಾ ದಾಂಡಿಯಾ ಫೆಸ್ಟ್ ಆಯೋಜಿಸಲಾಗಿದೆ. ಸಂಜೆ ಕಾರ್ಯಕ್ರಮ ನಡೆಯಲಿದ್ದು ಡಿಜೆ ಸೌಂಡ್ಸ್ ವ್ಯವಸ್ಥೆ ಮಾಡಲಾಗಿದೆ. ಅತ್ಯುತ್ತಮ ದಂಪತಿ ಉಡುಗೆ ಹಾಗೂ ಅತ್ಯುತ್ತಮ ಉಡುಗೆ ಧರಿಸಿದ ಹುಡುಗ ಮತ್ತು ಹುಡುಗಿಗೆ ನಗದು ಬಹುಮಾನ ನೀಡಲಾಗುವುದು. ಈ ಕಾರ್ಯಕ್ರಮದ ಪ್ರವೇಶಾತಿ ಶುಲ್ಕ ಒಬ್ಬರಿಗೆ 200 ರೂ. ನಿಗದಿ ಮಾಡಲಾಗಿದ್ದು, ಹತ್ತು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಟಿಕೆಟ್‌ಗಾಗಿ ಮೊ. 8762000009, 8105198586 ಸಂಪರ್ಕಿಸಬಹುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.