ಆನಂದಪುರ: ಇಲ್ಲಿನ ಗ್ರಾಪಂನಿಂದ ಶುಕ್ರವಾರ ಸ್ವಚ್ಛತೆಯೇ ಸೇವೆ ಎಂಬ ಸರ್ಕಾರದ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಸಹಕಾರ ಪಡೆದು ಬಸ್‌ನಿಲ್ದಾಣದ ಆವರಣ ಸ್ವಚ್ಛಗೊಳಿಸಲಾಯಿತು. ಗಾಂಧಿ ಜಯಂತಿ ದಿನವಾದ ಅ.2ರ ತನಕ ಅಭಿಯಾನ ನಡೆಯಲಿದೆ ಎಂದು ಪಿಡಿಒ ಪ್ರವೀಣ ತಿಳಿಸಿದರು.
ಕಸಾಪ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಸದಸ್ಯರು ಸೇರಿ ತ್ಯಾಜ್ಯ ವಸ್ತುಗಳನ್ನು ಆರಿಸಿದರು ಹಾಗೂ ಅನಗತ್ಯ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು.