ಜಿಲ್ಲೆ

ಅ.26ರಂದು ಸಿಎಂ ಅಧ್ಯಕ್ಷತೆ ಮಳೆ ಹಾನಿ ಪರಿಶೀಲನಾ ಸಭೆ

ಚಿತ್ರದುರ್ಗ:ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ಶನಿವಾರ ಮಳೆ ಹಾನಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ಮಳೆಯಿಂದ ಬೆಳೆ ಹಾನಿಗೊಳಗಾದ ಜಿಲ್ಲೆಯ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿ ಶೀಲಿಸಿದ ಅವರು, ಅಧಿಕ ಮಳೆ ಸುರಿದಿರುವ ರಾಜ್ಯದ ಹತ್ತು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ.

ಮುಂಗಾರು,ಹಿಂಗಾರು ಸೇರಿದಂತೆ ರಾಜ್ಯದಲ್ಲಿ 115 ಜನರ ಪ್ರಾಣಹಾನಿ ಆಗಿದೆ. ಮನೆ,ಬೆಳೆಗಳಿಗೂ ಹಾನಿಯಾಗಿದೆ. ಅಂದಾಜು 56 ಹೆಕ್ಟೇರ್ ಬೆಳೆ ನಾಶವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಶೇ.60 ಅಧಿಕ ಮಳೆಯಾಗಿದೆ. 170 ಮಿ.ಮೀ.ಮಳೆಯಾ ಗಿದೆ,ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಮಳೆ ಬಿಡುವು ಕೊಟ್ಟಿದ್ದು ಮುಂದಿನ ಮೂರ‌್ನಾಲ್ಕು ದಿನಗಳಲ್ಲಿ ನಡೆಯಲಿರುವ ಕಂದಾಯ,ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುವುದು. ಇದರಿಂದ ಬೆಳೆ ಹಾನಿ ನಿಖರತೆ ಗೊತ್ತಾಗಲಿದ್ದು, ವರದಿ ಕೈ ಸೇರುತ್ತಿದ್ದಂತೆ ಪರಿಹಾರ ಕೊಡಲಾಗುವುದು. ರಾಜ್ಯ ದಲ್ಲಿ 666 ಕೋಟಿ ರೂ.ಅನುದಾನ ಲಭ್ಯವಿದೆ ಎಂದರು.

ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ,ಉಡಾಫೆ ಹೇಳಿಕೆಗೆ ಉತ್ತರಿಸುವುದಿಲ್ಲ. ಎಲ್ಲ ಹಾನಿಗಳಿಗೂ ಪರಿಹಾರ ಕೊಟ್ಟಿದ್ದೇವೆ. ಹಿಂಗಾರು ಮಳೆಯಿಂದ ಆದ ಆಗಿರುವ ಹಾನಿಗೂ ಪರಿಹಾರ ಬಿಡುಗಡೆ ಮಾಡುತ್ತೇವೆ. ರೈತರ ಬಗ್ಗೆ ಕಾಳಜಿ ಇದ್ದರೆ ಪರಿಹಾರ ಮೊತ್ತ ಹೆಚ್ಚಿಸುವಂತೆ ಕೇಂದ್ರವನ್ನು ಬಿಜೆಪಿ-ಜೆಡಿಎಸ್ ಮುಖಂಡರು ಒತ್ತಾಯಿಸಲಿ.

ನಾವೂ ಕೂಡ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿಹಾರ ಮೊತ್ತ ಹೆಚ್ಚಿಸುವಂತೆ ಮ ನವಿ ಮಾಡಿದ್ದೇವೆ. ವಿಜಯೇಂದ್ರ ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ. 5333 ಕೋಟಿ ರೂ.ಗಳಲ್ಲಿ ಒಂದು ಪೈಸೆಯನ್ನು ಕೇಂದ್ರ ಕೊಟ್ಟಿಲ್ಲ.ಎನ್‌ಡಿಎ ನಾಯಕರಿಗೆ ನಾಡು ನುಡಿ,ಜನ ಬಗ್ಗೆ ಕಾಳಜಿ ಇದ್ದರೆ ಹಣ ಬಿಡುಗಡೆ ಮಾಡಿಸಲಿ. ಹಿಟ್ ಆ್ಯಂ ಡ್ ರನ್ ಹೇಳಿಕೆ ಬಿಟ್ಟು ನಮ್ಮ ಪಾಲಿನ ಹಣ ಕೊಡಿಸಲಿ ಎಂದರು.

ಶಿಗ್ಗಾಂವ್ ಕ್ಷೇತ್ರದಲ್ಲಿ ಎಲ್ಲ ವರಿಷ್ಠರು ಎಲ್ಲ ರೀತಿಯಲ್ಲೂ ಆಲೋಚಿಸಿ ಟಿಕೆಟ್ ಕೊಟ್ಟಿದ್ದಾರೆ. ಟಿಕೆಟ್ ಸಿಗದೇ ಇದ್ದಾಗ ಬೇಸರ ಸಹಜ. ಟಿಕೆಟ್ ಸಿಕ್ಕಿದ್ದರೆ ಅಜ್ಜಂ ಪೀರ್‌ಖಾದ್ರಿ ಬೇರೆ ರೀತಿಯಾಗಿ ಮಾತನಾಡುತ್ತಿದ್ದರು. ಎಲ್ಲರನ್ನೂ ಜತೆಯಾಗಿ ಕರೆದುಕೊಂಡು ಹೋಗುವುದು ಪಕ್ಷದ ಉದ್ದೇಶ ವಾಗಿದೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಎಂಟು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಜಿ ಸಚಿವ ಸೋಮಶೇಖರ್ ಹೇಳಿಕೆ ಪ್ರಸ್ತಾಪಿಸಿ ಯಾವ ಪಕ್ಷ ಮುಳುಗುತ್ತಿರುವ ಹಡಗೆಂದು ಪ್ರಶ್ನಿಸಿದರು.

ವಿವಿಧ ಗ್ಯಾರಂಟಿಗಳ ಮೂಲಕ ರಾಜ್ಯದ 5 ಕೋಟಿ ಜನರಿಗೆ 56 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ತಲುಪಿಸುತ್ತಿದ್ದೇವೆ. ಬಡವರ ಪರ ಕೆಲಸ ಮಾಡುತ್ತಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಏನಾದರೂ ಮಾಡಿ ನಮ್ಮ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಗ್ಯಾರಂಟಿಗಳನ್ನು ಬಂದ್ ಮಾಡಿ ಅವರಿಗೆ ಅಂಬಾನಿ ,ಆದಾನಿಗೆ ಹಣ ಕೊಡುವುದು ಅವರಿಗೆ ಖುಷಿ. ನಮಗೆ ಅಂಬಣ್ಣ,ತಿಮ್ಮಣ್ಣನಿಗೆ ಹಣ ಕೊಡುವುದು ನಮ್ಮ ಉದ್ದೇಶವಾಗಿದೆ ಎಂದ ಗ್ಯಾರಂಟಿಗಳನ್ನು ಪ್ರಪಂಚಕ್ಕೆ ಮಾದರಿಯಾಗಿವೆ ಎಂದರು.

ಜೆಡಿಎಸ್-ಬಿಜೆಪಿಯವರು ಸರ್ಕಾರ ಬೀಳಿಸಲು ಪಿತೂರಿ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಸೆಲ್ಫ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಇವರೇ ಮತ್ತೆ ಮುಖ್ಯಮಂತ್ರಿ ಆಗುವುದಾದರೆ ನಮ್ಮ ಗತಿ ಏನೆಂದು ಒಕ್ಕಲಿಗರ ಶಾಸಕರಿಗೆ ಚಿಂತೆ ಯಾಗಿದೆ. ಮುಖ್ಯಮಂತ್ರಿಯಾಗಬೇಕೆಂದು ವಿಜಯೇಂದ್ರಗೆ ಟೆನ್ಷನ್ ಶುರುವಾಗಿದ್ದು, ಈ ನಡುವೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಸಿಎಂ ಆಗಲು ಪ್ಲಾನ್ ನಡೆಸಿದ್ದಾರೆ ಎಂದರು.

----